ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷೇತರರಾಗಿ ಉದಯಸಿಲಿರುವ ವಾರ್ಡ್ 5 ರ ಸೇವಕ ಪುಡಕಲಕಟ್ಟಿ " ಸೂರಜ ''

ನಮ್ಮ ವಾರ್ಡ್ ಅಭಿವೃದ್ಧಿ ಆಗ್ಬೇಕು, ಇತರರಿಗೆ ಮಾದರಿಯಾಗ್ಬೇಕು ಎಂಬ ಕನಸನ್ನೇ ಸವಾಲಾಗಿ ಸ್ವೀಕರಿಸಿ ಇಲ್ಲೊಬ್ಬ ಯುವಕ ರಾಜಕೀಯಕ್ಕೆ ಧುಮುಕಿದ್ದಾರೆ, ಅರೆ,! ರಾಜಕಾರಣ ಅಂದ್ರೇ ಕೇವಲ ಕುರ್ಚಿಗಾಗಿ ಗರಿ ಗರಿಯಾದ ಬಟ್ಟೆಗಾಗಿ ಅಲ್ಲಾ ಬದಲಾಗಿ ಸೇವೆಗಾಗಿ, ಸಹಕಾರಕ್ಕಾಗಿ, ಮೂಲ ಸೌಕರ್ಯಕ್ಕಾಗಿ ಜನರ ಅಭ್ಯುದಯಕ್ಕಾಗಿ.

ಆ ಯುವಕನ ಹೆಸರೇ ಸೂರಜ ಪುಡಕಲಕಟ್ಟಿ. ಕಳೆದ ಮೂರು ವರ್ಷಗಳಿಂದ ನೊಂದವರ ಧ್ವನಿಯಾಗಿ, ಸೌಕರ್ಯ ಒದಗಿಸುವಲ್ಲಿ ಸೇವಕನಾಗಿ, ನಿಮ್ಮೂರು ನಿಮ್ಮ ವಾರ್ಡ್ 5ರ ತೇಲಗೇರಿ ಓಣಿಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಈ ವಜ್ರದಂತ ಹುಡುಗ ಸೂರಜ ಪುಡಕಲಕಟ್ಟಿ ಗುರುತೇ ವಜ್ರ.

ತಾನು ರಾಜಕೀಯಕ್ಕೆ ಬರುವ ಮುಂಚೆಯೇ ಪ್ರತಿಯೊಂದು ಜನರ ಕಷ್ಟ ಹಾಗೂ ಸೇವೆಗೆ ಬದ್ಧನಾಗಿ ವೃದ್ಧರಿಗೆ ವೇತನ, ವಿವಿಧ ಸೇವೆ ಅರ್ಹರಿಗೆ ನೀಡುವಲ್ಲಿ ಸಹಭಾಗಿತ್ವ, ತಮ್ಮ ವಾರ್ಡಿಗೆ ನಳಗಳ ಸಂಪರ್ಕ, ಸ್ವ ಸಹಾಯ ಸಂಘಗಳಿಗೆ ಸಾಲ ಸೌಲಭ್ಯ, ಅಂಗವಿಕಲರಿಗೆ ಪಿಂಚಣಿ, ವಿವಿಧ ಸರ್ಕಾರಿ ಮಟ್ಟದ ಯೋಜನೆಗಳನ್ನು ಹುಡುಕಿ ತಂದು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾಯಕ ಯೋಗಿ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಈ ಬಿಎಸ್ಸಿ ಪದವೀಧರ ಯುವಕನ ಬಗ್ಗೆ ಜನರಿಗೆ ಸೂರಜನ ಬಗೆಗಿರುವ ಮೆಚ್ಚುಗೆ ಕೇಳಿದ್ರೇ ನಿಜಕ್ಕೂ ಇದು ಅವರ ಸೇವೆಯ ಫಲವೇ.

ಗೆಳೆಯರ ಗುಂಪಲ್ಲಿ ನಾಯಕನಾಗಿ, ಹಿರಿಯರ ಗುಂಪಲ್ಲಿ ಸೇವಕನಾಗಿ, ವೃದ್ಧರ ಬಾಳಲ್ಲಿ ಬೆಳಕಾಗಿ, ಅಂಗವಿಕಲರಿಗೆ ಊರುಗೋಲಾಗಿ ನಿಸ್ವಾರ್ಥ ಸೇವೆ ಗೈದ ಯುವಕ ಸೂರಜನ ಪುಡಕಲಕಟ್ಟಿ ಅಬ್ಬರದ ಪ್ರಚಾರ, ಅಭಿವೃದ್ಧಿ ಪ್ರೇಮಕ್ಕೆ ಈ ಬಾರಿ ವಿಜಯಲಕ್ಷ್ಮೀ ಓಲಿಯಲು ಬೇಕಾಗಿದೆ ವಾರ್ಡ್ ನಂಬರ್ ಐದರ ಜನತೆಯ ಸಹಕಾರ ಆರ್ಶಿವಾದವೇ ಶ್ರೀರಕ್ಷೆ.

Edited By : Shivu K
Kshetra Samachara

Kshetra Samachara

29/08/2021 08:41 am

Cinque Terre

62.34 K

Cinque Terre

1

ಸಂಬಂಧಿತ ಸುದ್ದಿ