ಹುಬ್ಬಳ್ಳಿ- ವಾರ್ಡ್ ನಂಬರ್ 28 ಪಕ್ಷೇತರ ಅಭ್ಯರ್ಥಿ ಡಾ.ವಿಜಯಕುಮಾರ್ ಅಪ್ಪಾಜಿ ಅವರು ಇಂದು ನವನಗರ ಭಾಗದ ಪಂಚಾಕ್ಷರಿ ನಗರ, ಕೆಸಿಸಿ ಲೇಔಟ್ ದಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಇದೇ ಸಂದರ್ಭದಲ್ಲಿ ಪಕ್ಷ ನೋಡುವುದಿಲ್ಲ ವ್ಯಕ್ತಿ ನೋಡುತ್ತೇವೆ ಎಂದು ಸಾರ್ವಜನಿಕರು ಸಹ ಅವರಿಗೆ ಬೆಂಬಲ ಸೂಚಿಸಿದರು. ನೀವು ಬಹಳ ವರ್ಷಗಳಿಂದ ಸಮಾಜ ಸೇವೆ ಸಲ್ಲಿಸುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಹೀಗಾಗಿ ನಿಮಗೆ ಮತ ಹಾಕುತ್ತೇವೆ ಎಂದು ವಾರ್ಡ್ ಜನರು ಭರವಸೆ ನೀಡಿದ್ದಾರೆ.
Kshetra Samachara
28/08/2021 10:36 pm