ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಪಕ್ಕಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಮೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಇಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿದ್ದರೂ ಕೂಡ ಪಾಲಿಕೆ ಚುನಾವಣೆಗಳಲ್ಲಿ ಗೆಲುವು ಸಾಧಿಸೋದು ನಿಶ್ಚಿತ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳಿಗೆ ಬಂದಾಗ ಅವರಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ಗೊತ್ತು. ಸದ್ಯ ನಮ್ಮ ಪಕ್ಷ ಪಾಲಿಕೆಗಳಲ್ಲಿ ಅಧಿಕಾರ ಹಿಡಿಯೋದು ಪಕ್ಕಾ ಎಂದರು.
ಇನ್ನೂ ಮೈಸೂರು ವಿವಿ ಹೊರಡಿಸಿದ್ದ ವಿವಾದತ್ಮಕ ಆದೇಶ ವಾಪಸ್ ಪಡೆದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಒಬ್ಬ ಕುಲಪತಿ ಆಗಿ ಹೆಣ್ಣುಮಕ್ಕಳು ಎಲ್ಲೂ ಓಡಾಡಬಾರು ಅಂತ ಹೇಳ್ತಾರೆ. ವಿಶ್ವವಿದ್ಯಾಲಯದಲ್ಲೇ ಹೆಣ್ಣುಮಕ್ಕಳಿಗೆ ಈ ರೀತಿ ಆದ್ರೆ ಹೆಂಗೆ. ಸರ್ಕಾರ ಹೆಣ್ಣುಮಕ್ಕಳ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಿದ್ದಾಗ ಇಂತಹ ಸರ್ಕಾರ ಯಾಕೆ ಬೇಕು, ಅಂತಹ ಕುಲಪತಿಯನ್ನ ತೆಗೆದುಹಾಕಬೇಕು. ಇನ್ನೂ ಗೃಹ ಮಂತ್ರಿಗಳ ಹೇಳಿಕೆ ಹಾಗೂ ಉಮೇಶ್ ಕಟ್ಟಿ ಹೇಳಿಕೆ ಕುರಿತು ನಮಗೆ ಒಳ್ಳೆಯ ಗೃಹ ಮಂತ್ರಿಗಳು ಮತ್ತು ಸರ್ಕಾರ ಸಿಕ್ಕಿದೆ. ನಮಗೆ ಸುರಕ್ಷಿತ ಆಡಳಿತ ನೀಡ್ತಾರೆ ಎಂದು ಆಡಳಿತರೂಢ ಬಿಜೆಪಿ ಪಕ್ಷದ ಬಗ್ಗೆ ವ್ಯಂಗ್ಯವಾಗಿ ನುಡಿದರು.
Kshetra Samachara
28/08/2021 06:58 pm