ಧಾರವಾಡ: ವಾರ್ಡ್ ನಂಬರ್ 15 ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಪಾಲಿಕೆ ಮಾಜಿ ಸದಸ್ಯ ದೀಪಕ ಚಿಂಚೋರೆ ಅವರ ಪುತ್ರ ಅನಿರುದ್ಧ ಚಿಂಚೋರೆ ಅವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ವಿಪ್ರ ಮತದಾರರೇ ಹೆಚ್ಚಾಗಿರುವ ಮಾಳಮಡ್ಡಿಯಲ್ಲಿ ಸ್ವತಃ ಅನಿರುದ್ಧ ಅವರೇ ಪ್ರತಿನಿತ್ಯ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಮತಯಾಚನೆ ಮಾಡುತ್ತಿದ್ದಾರೆ. ಇತ್ತ ಜಯನಗರ, ಗೋಪಾಲಪುರ, ಸಿಐಟಿಬಿ ಕಾಲೊನಿ, ಕಬ್ಬೂರ ರಸ್ತೆಯಲ್ಲಿ ಅನಿರುದ್ಧ ಅವರ ತಾಯಿ ಹಾಗೂ ಪತ್ನಿ ಬಿರುಸಿನ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಇನ್ನು ದೀಪಕ ಚಿಂಚೋರೆ ಅವರು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನೇ ಕರೆಯಿಸಿ ಮತದಾರರ ಮನವೊಲಿಸುವ ಕೆಲಸ ಮಾಡಿದರು. ಒಟ್ಟಾರೆಯಾಗಿ ಅನಿರುದ್ಧ ಅವರ ಸ್ಪರ್ಧೆಯಿಂದ ವಾರ್ಡ್ ನಂಬರ್ 15 ತೀವ್ರ ರಂಗು ಪಡೆದುಕೊಂಡಿದ್ದು, ಬಿರುಸಿನ ಸ್ಪರ್ಧೆ ನಡೆಯಲಿದೆ. ಅನಿರುದ್ಧ ಅವರ ತಂದೆ ದೀಪಕ ಅವರು ಕೂಡ ಪಾಲಿಕೆ ಸದಸ್ಯರಾಗಿ ಸಾಕಷ್ಟು ಜನಪರ ಕೆಲಸ ಮಾಡಿದ್ದು, ಅವರ ಆಶೀರ್ವಾದ ಅನಿರುದ್ಧ ಅವರ ಮೇಲಿದೆ. ಹೀಗಾಗಿ 40 ವರ್ಷಗಳ ನಂತರ 15ನೇ ವಾರ್ಡಿನಲ್ಲಿ ಕೈ ಮೇಲುಗೈ ಸಾಧಿಸಲಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
Kshetra Samachara
28/08/2021 12:02 pm