ಹುಬ್ಬಳ್ಳಿ: ಆತ ನಿಜಕ್ಕೂ ಜನ ಸ್ನೇಹಿ ನಾಯಕ. ಜನರ ಕಷ್ಟ ಅಂದರೆ ಸಾಕು ಎಲ್ಲವನ್ನೂ ಬದಿಗಿಟ್ಟು ಕೈ ಜೋಡಿಸುವ ಕರುಣಾಮಯಿ. ಯಾವುದೇ ಸಂದರ್ಭದಲ್ಲಿಯೂ ಎದೆಗುಂದದೆ ಜನರ ನೆರವಿಗೆ ನಿಲ್ಲುವ ಛಲಗಾರ. ಹಿಡಿದ ಕಾರ್ಯವನ್ನು ಕೈ ಬಿಡದೇ ಮುನ್ನುಗ್ಗುವ ನಾಯಕ. ಹಸಿದವರಿಗೆ ಅನ್ನ, ರೋಗಿಗಳ ಚಿಕಿತ್ಸೆ ವ್ಯವಸ್ಥೆ ಮಾಡುವ ಸಮಾಜ ಸೇವಕ ಹಾಗಿದ್ದರೇ ಯಾರು ಈ ಕರುಣಾಮಯಿ ನಾಯಕ ಅಂತೀರಾ ಇಲ್ಲಿದೆ ನೋಡಿ ನಾಯಕನ ಸ್ಟೋರಿ...
ಹೀಗೆ ಸಾರ್ವಜನಿಕರ ಹಸಿವನ್ನು ನೀಗಿಸುತ್ತಿರುವ ಈ ಜನನಾಯಕನ ಹೆಸರು ಇಮ್ರಾನ್ ಯಲಿಗಾರ. ನಮ್ಮ ಕಷ್ಟಗಳಿಗೆ ನಮ್ಮವರೇ ನೆರವಾಗದಿರುವ ಸಂದರ್ಭದಲ್ಲಿ ಯಾರೇ ಕಷ್ಟದಲ್ಲಿ ಇದ್ದರೂ ಜಾತಿ ಮತ ಧರ್ಮದ ಬೇಧ ನೋಡದೇ ಸಹಾಯಕ್ಕೆ ಬರುವ ವ್ಯಕ್ತಿಯೇ ಇಮ್ರಾನ್ ಯಲಿಗಾರ. ಈ ಬಾರಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ 33ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಹುಬ್ಬಳ್ಳಿ ಆನಂದ ನಗರದ ಇಮ್ರಾನ್ ಯಲಿಗಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವಕರ ನೆಚ್ಚಿನ ನಾಯಕರಾಗಿರುವ ಇಮ್ರಾನ್ ಯಲಿಗಾರ ಅಂದರೆ ಸಾಕು ಯುವ ಸಮುದಾಯಕ್ಕೆ ಅಚ್ಚು ಮೆಚ್ಚು. ಯಾವುದೇ ಕಾರ್ಯಕ್ರಮ ಇದ್ದರೂ ಮುಂದಾಳತ್ವ ವಹಿಸಿಕೊಂಡ ಎಲ್ಲರ ಮನೆಯ ಮಗನಂತೆ ಕಾರ್ಯ ನಿರ್ವಹಿಸುವ ಇಮ್ರಾನ್ ಯಲಿಗಾರ ತಮ್ಮ ದೈನಂದಿನ ಸಮಯದಲ್ಲಿ ಹೆಚ್ಚು ಸಮಯ ಸಾರ್ವಜನಿಕ ಸೇವೆಗಾಗಿಯೇ ಮೀಸಲು ಇಟ್ಟಿದ್ದಾರೆ.
ಕಿಲ್ಲರ್ ಕೊರೋನಾ ಸಂದರ್ಭದಲ್ಲಿ ಕಳೆದ ವರ್ಷ ಕೂಡ ಸುಮಾರು ಮೂರುಸಾವಿರ ಆಹಾರ ಕಿಟ್ ವಿತರಿಸಿ ಜನರ ಹಸಿವನ್ನು ನೀಗಿಸಿದ್ದ ಅವರು, ಈ ವರ್ಷ ಕೂಡ ಐದು ಸಾವಿರ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ಹಬ್ಬ ಹರಿದಿನಗಳಲ್ಲಿ ನಿರ್ಗತಿಕರಿಗೆ ಹಾಗೂ ಬಡ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡುವ ಮೂಲಕ ಎಲ್ಲರೂ ಸಂತೋಷದಿಂದ ಹಬ್ಬ ಆಚರಣೆ ಮಾಡುವಂತೆ ಮಾಡಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಸಾಕಷ್ಟು ಏಳು ಬೀಳು ಅನುಭವಿಸಿರುವ ಯಲಿಗಾರ ಎಂ.ಎಲ್.ಸಿ ಶ್ರೀನಿವಾಸ ಮಾನೆ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರ ರಾಜಕೀಯ ಪ್ರೇರಣೆಯಿಂದ ಸಾಕಷ್ಟು ಜನಪರ ಕಾರ್ಯವನ್ನು ಮಾಡಿದ್ದಾರೆ. ಅಲ್ಲದೇ ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯಲ್ಲಿ ಎರಡು ಉಚಿತ ಅಂಬ್ಯುಲೆನ್ಸ್ ನೀಡುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿದ್ದಾರೆ.
ಸಾರ್ವಜನಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸುವ ಇಮ್ರಾನ್ ಯಲಿಗಾರ, ಜನರ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ, ಬೀದಿ ದ್ವೀಪ, ಡ್ರೈನೇಜ್ ಹಾಗೂ ಇನ್ನಿತರ ಯಾವುದೇ ಸಮಸ್ಯೆಗಳಿಗೂ ಕೂಡಲೇ ಪರಿಹಾರ ಕಲ್ಪಿಸಿ ಕೊಡುವ ಮೂಲಕ ಎಲ್ಲರ ಮನೆಯ ಮಗನಂತಾಗಿದ್ದಾರೆ. ಇವರ ಕಾರ್ಯದ ಕುರಿತು ಇಲ್ಲಿನ ಜನರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜನಮೆಚ್ಚಿದ ನಾಯಕನಾಗಿರುವ ಇಮ್ರಾನ್ ಯಲಿಗಾರ ನಿಜಕ್ಕೂ ಸಾಕಷ್ಟು ಜನಸೇವೆಯನ್ನು ಮಾಡುವ ಮೂಲಕ ಜನಜನಿತರಾಗಿದ್ದಾರೆ. ಇವರ ಕಾರ್ಯಕ್ಕೆ ಜನರು ಆಶೀರ್ವಾದ ಮಾಡಿ ವಾರ್ಡ್ ನಂಬರ 33ರಲ್ಲಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಿ ಜನರ ಸೇವೆಗೆ ಸಿದ್ಧವಾಗಲಿ ಎಂಬುವುದು ಎಲ್ಲರ ಆಶಯ...
Kshetra Samachara
28/08/2021 10:21 am