ಧಾರವಾಡ: ಇಲ್ಲಿನ ಹಿರಿಯ ಪತ್ರಕರ್ತ ಸೂರ್ಯಕಾಂತ್ ಶಿರೂರ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ನಿನ್ನೆ ಗುರುವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ನಿಧನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿಎಂ ಟ್ವೀಟ್ ಹೀಗಿದೆ..
ಧಾರವಾಡದ ಸಂಜೆವಾಣಿ ಪತ್ರಿಕೆ ವರದಿಗಾರರಾಗಿದ್ದ ಶ್ರೀ ಸೂರ್ಯಕಾಂತ ಶಿರೂರ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Kshetra Samachara
27/08/2021 09:26 pm