ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲು ಕರ್ನಾಟಕ ಸಂಗ್ರಾಮ ಸೇನೆ ಒತ್ತಾಯ

ಕಲಘಟಗಿ: ಮೂರನೇ ಅಲೆಯ ಕೊರೊನಾ ಹಿನ್ನಲೆಯಲ್ಲಿ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆಗೆ ಅವಕಾಶವಿಲ್ಲವೆಂದು ಸರಕಾರ ಹೇಳುತ್ತಿರುವುದು ಸರಿಯಲ್ಲ,ರಾಜ್ಯದಲ್ಲಿ ಎಲ್ಲಾ ಹಿಂದೂ ಧರ್ಮದವರಿಗೆ ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕ ಸಾರ್ವಜನಿಕ ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡಲು ಅವಕಾಶ‌ ನೀಡುವಂತೆ ಕರ್ನಾಟಕ ಸಂಗ್ರಾಮ ಸೇನೆಯ ಕಲಘಟಗಿ ತಾಲೂಕು ಅಧ್ಯಕ್ಷ ಸಾತಪ್ಪ ಕುಂಕೂರ ಒತ್ತಾಯಿಸಿದ್ದಾರೆ‌.

ಪ್ರತಿ ವರ್ಷದಂತೆ ಗಣೇಶ ಚತುರ್ಥಿಯ ಅಂಗವಾಗಿ

ಗಣೇಶ ಯುವಕ ಮಂಡಳಗಳು ವಿಜೃಂಭಣೆಯಿಂದ ಸಾರ್ವಜನಿಕ ಗಣೇಶ ಚತುರ್ಥಿಯನ್ನು ಆಚರಿಸಲು ಅನುಮತಿ ನೀಡಬೇಕೆಂದು ಸರಕಾರಕ್ಕೆ ಮನವಿಯನ್ನು ಸಹ ಕೊಡಲಾಗುವುದು ಎಂದು ತಿಳಿಸಿದರು.ಗಣೇಶ ಚತುರ್ಥಿ ಆಚರಣೆಯ ವೇಳೆ ಸಾಮಾಜಿಕ ಅಂತರ,ಮಾಸ್ಕ್ ಗಳಂತಹ ನಿಯಮಗಳನ್ನು ‌ಪಾಲಿಸುವ ಮೂಲಕ ಹಬ್ಬದ ಆಚರಣೆಗೆ ಅವಕಾಶ ನೀಡಲು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸೇನಾ ತಾಲೂಕು ಉಪಾಧ್ಯಕ್ಷ ಶಂಕರಗೌಡ ಭಾವಿಕಟ್ಟಿ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

27/08/2021 02:43 pm

Cinque Terre

25.93 K

Cinque Terre

0

ಸಂಬಂಧಿತ ಸುದ್ದಿ