ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹು-ಧಾ ಪಾಲಿಕೆ ಚುನಾವಣೆ : ಮತದಾನ ಬಹಿಷ್ಕರಿಸಿದ ಭೈರಿದೇವರಕೊಪ್ಪ ನಿವಾಸಿಗಳು

ಹುಬ್ಬಳ್ಳಿ- ಕಳೆದ ಕೆಲವು ವರ್ಷಗಳಿಂದ ಭೈರಿದೇವರಕೊಪ್ಪದ ರಾಜಧಾನಿ ಕಾಲೋನಿ, ಮಲ್ಲನಗೌಡ ಚಾಳ, ನಮ್ರತಾ ಪಾರ್ಕ್ ಬಡಾವಣೆಗಳಿಗೆ ರಸ್ತೆ ಮಾರ್ಗವನ್ನು ಕಲ್ಪಿಸದ ಜನಪ್ರತಿನಿದಿನಗಳ ನಡೆ ವಿರೋಧಿಸಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವದಾಗಿ ನಿವಾಸಿಗಳು ತಿಳಿಸಿದ್ದಾರೆ.

ಇನ್ನೂ ಬಡಾವಣೆಯ ವ್ಯಾಪ್ತಿಯಲ್ಲಿ ಸುಮಾರು 1000 ಕ್ಕೂ ಜನರು ವಾಸವಿದ್ದು, 500 ಕ್ಕೂ ಹೆಚ್ಚು ಮತದಾರರಿದ್ದಾರೆ. ಪ್ರತಿ ಮನೆ ಮನೆಯ ಮುಂದೆಯೂ ಮತದಾನ ಬಹಿಷ್ಕಾರ ಎಂಬ ಸೂಚನಾ ಫಲಕ ನೇತು ಹಾಕಿ ಪಾಲಿಕೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯು ಮತ ಕೇಳಲು ಬರಬೇಡಿ ಎಂಬ ಸಂದೇಶ ನೀಡಿದ್ದಾರೆ. ಕೆಲವು ವರ್ಷಗಳಿಂದ ಬಡಾವಣೆಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನೇ ಬಂದ್ ಮಾಡಿರುವದಕ್ಕೆ ಆಕ್ರೋಶ ಹೊರಹಾಕಿ, ಈಗಾಗಲೇ ಸಾಕಷ್ಟು ಬಾರಿ ಶಾಸಕರು, ಸಚಿವರು, ಕಾರ್ಪೊರೇಟರಗಳಿಗೆ ಮನವಿ ಸಲ್ಲಿಸಿದರು ಯಾರು ಕೂಡ ಮುತುವರ್ಜಿ ವಹಿಸಿಲ್ಲ. ಇದೀಗ ಮತದಾನ ಬಹಿಷ್ಕಾರ ಮಾಡಿರುವ ಸುದ್ದಿ ತಿಳಿದು ಬರುವ ನಾಯಕರು ನಮಗೆ ಶಾಶ್ವತ ಪರಿಹಾರ ನೀಡಲಿ ಇಲ್ಲದಿದ್ರೆ ಮತದಾನ ಬಹಿಷ್ಕರಿಸುತ್ತೇವೆ ಎಂದು ಜನಪ್ರತಿನಿದಿಗಳ ವಿರುದ್ದ ಕಿಡಿಕಾರಿದರು.

Edited By : Nagesh Gaonkar
Kshetra Samachara

Kshetra Samachara

26/08/2021 04:49 pm

Cinque Terre

42.72 K

Cinque Terre

15

ಸಂಬಂಧಿತ ಸುದ್ದಿ