ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

62ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಭಾರತಿ ರವೀಂದ್ರ ವೈ: ಸಾರ್ವಜನಿಕರೇ ಇನ್ನು ನಿಮ್ಮೆಲ್ಲರ ಸಮಸ್ಯೆಗೆ ಹೇಳಿ ಬೈ ಬೈ...!

ಹುಬ್ಬಳ್ಳಿ: ಆ ದಂಪತಿ ಸಮಾಜ ಸೇವಕರು. ಸಮಾಜ ಸೇವೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಬೇರೆಯವರಿಗೆ ಖುಷಿಯಲ್ಲಿಯೇ ನಗುವನ್ನು ಕಂಡವರು. ಹಸಿದ ಹೊಟ್ಟೆಗೆ ಅನ್ನ, ಅನಾರೋಗ್ಯದಿಂದ ಬಳಲುವವರಿಗೆ ವೈದ್ಯಕೀಯ ಚಿಕಿತ್ಸೆ ಹೀಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯವನ್ನು ಈ ದಂಪತಿ ಮಾಡಿದ್ದಾರೆ. ಇದನ್ನೇ ಗುರುತಿಸಿದ ಬಿಜೆಪಿ, ಪಾಲಿಕೆ ಚುನಾವಣೆಗೆ ಅವಕಾಶ ಕಲ್ಲಿಸಿದೆ. ಹಾಗಿದ್ದರೇ ಯಾರು ಆ ಸಮಾಜ ಸೇವೆ ಮಾಡುತ್ತಿರುವ ದಂಪತಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...

ಹೀಗೆ ಅನ್ನದಾನ ಮಾಡುತ್ತಿರುವ ಈ ದಂಪತಿ ಹೆಸರು ಡಾ.ರವೀಂದ್ರ ವೈ ಹಾಗೂ ಭಾರತಿ ರವೀಂದ್ರ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ವಾರ್ಡ್ ನಂಬರ-62 ರಿಂದ ಭಾರತಿ ರವೀಂದ್ರ ವೈ ಅವರು ಸ್ಪರ್ಧಿಸುತ್ತಿದ್ದಾರೆ. ಬಿ ಕಾಂ, ಡಿಸಿಎ, ಎನ್‌ಟಿಟಿಸಿ ಪದವೀಧರೆಯಾದ ಭಾರತಿಯವರು ಸೇವಾ ಇಂಟರ್ ನ್ಯಾಶನಲ್ ಮೂಲಕ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಜನರಿಗೆ ಸಾಮಾಜಿಕ ಜಾಗೃತಿ ಮೂಡಿಸಿ ಸಾಕಷ್ಟು ಜನಮನ್ನಣೆ ಪಡೆದ ಮುಗ್ಧ ಸ್ವಭಾವದ ಮಹಿಳೆಯೇ ಈ ಭಾರತಿ ರವೀಂದ್ರ ವೈ.

ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ರವೀಂದ್ರ ವೈ ಅವರ ಸಾಮಾಜಿಕ ಕಾರ್ಯಕ್ಕೆ ಕೈ ಜೋಡಿಸಿರುವ ಭಾರತಿಯವರಿಗೆ ಪತಿಯೇ ಪ್ರೇರಣೆ. ಅವರ ಅನುಭವದ ಮಾರ್ಗದಲ್ಲಿಯೇ ಮುನ್ನಡೆದು ಈ ಭಾರಿ ಚುನಾವಣೆಯಲ್ಲಿ 62ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ.

ಡಾ. ರವೀಂದ್ರ ವೈ ಅವರು ಸುಮಾರು 30 ವರ್ಷಗಳ ಕಾಲ ಆಯುಷ್ಯ ವೈದ್ಯಕೀಯ ಸೇವೆ ಮೂಲಕ ಇಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಸತತ ಮೂವತ್ತು ವರ್ಷಗಳ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿರುವ ಡಾ.ರವೀಂದ ಅವರಿಗೆ ಭಾರತೀಯ ಜನತಾ ಪಕ್ಷ ಧಾರವಾಡ ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಸಂಚಾಲಕರನ್ನಾಗಿ ನೇಮಕ ಮಾಡಿತ್ತು. ಅಲ್ಲದೇ ನಿಸ್ವಾರ್ಥ ಸೇವೆಯ ಫಲವಾಗಿ ಈಗ ಪಾಲಿಕೆ ಚುನಾವಣೆಗೆ ಪಕ್ಷ ಅವಕಾಶ ಕಲ್ಪಿಸಿದೆ.

ಸಾವಿರಾರು ಕುಟುಂಬಕ್ಕೆ ಆರೋಗ್ಯ ಸೇವೆ, ನೂರಾರು ಕುಟುಂಬಕ್ಕೆ ವ್ಯಾಕ್ಸಿನ್ ವಿತರಣೆಯಂತಹ ಕೆಲಸದ ಮೂಲಕ ಸಾರ್ವಜನಿಕರ ಆರೋಗ್ಯಕ್ಕೆ ಆದ್ಯತೆ ನೀಡಿರುವ ಅವರು ಈ ಬಾರಿಗೆ ಜನರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿ ಸರ್ಕಾರದ ಸೇವೆಯನ್ನು ಮನೆ ಮನೆಗೆ ತಲುಪಿಸುವ ಸದುದ್ದೇಶದಿಂದ ಪಾಲಿಕೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಜನರು ಕೂಡ ಆಶೀರ್ವಾದ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಎರಡು ಕೈ ಜೋಡಿಸಿದರೇ ಚಪ್ಪಾಳೆ ಎನ್ನುವಂತೆ ದಂಪತಿ, ಸಾರ್ವಜನಿಕರ ಸೇವೆಗೆ ಮುಂದಾಗಿದ್ದು, 62ನೇ ವಾರ್ಡಿನಲ್ಲಿ ಭಾರತಿ ರವೀಂದ ಅವರಿಗೆ ಜನರ ಆಶೀರ್ವಾದ ದೊರೆಯಬೇಕಿದೆ.

Edited By : Shivu K
Kshetra Samachara

Kshetra Samachara

26/08/2021 09:08 am

Cinque Terre

86.46 K

Cinque Terre

1

ಸಂಬಂಧಿತ ಸುದ್ದಿ