ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಭದ್ರ ಕೋಟೆ ಭೇದಿಸಿ ಯುದ್ಧ ಗೆಲ್ಲಲು ಸಜ್ಜಾದ ಅನಿರುದ್ಧ

ದೀಪಕ ಚಿಂಚೋರೆ.. ಈ ಹೆಸರಿಗೆ ತನ್ನದೇ ಆದ ಶಕ್ತಿ ಇದೆ. ಇವರು ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ ಹಿರಿಯ ಸದಸ್ಯರಾಗಿ ಮಾಡಿದ ಅಭಿವೃದ್ಧಿ ಹಾಗೂ ಜನಪರ ಕೆಲಸಗಳು ಅಸಂಖ್ಯ. ಎಲ್ಲಿ ಕೈ ಬಲವಿಲ್ಲವೋ ಅಲ್ಲಿ ಪಕ್ಷ ಸಂಘಟನೆ ಮಾಡಿ ಅಲ್ಲೊಬ್ಬ ನಾಯಕ ಹುಟ್ಟಿಕೊಳ್ಳುವಂತೆ ಮಾಡುವ ಶಕ್ತಿ ದೀಪಕ್ ಅವರಿಗಿದೆ. ಹೀಗಾಗಿಯೇ 1996 ಮತ್ತು 97ರಲ್ಲಿ ಪಾಲಿಕೆ ಚುನಾವಣೆಗೆ ಪಕ್ಷೇತರರಾಗಿ ನಿಂತು ಅಂದಿನ ಉಪಮೇಯರ್ ವಿರುದ್ಧವೇ ಜಯ ಗಳಿಸಿದ್ದರು. ಆನಂತರ ಅವರು ಪಾಲಿಕೆ ಸದಸ್ಯರಾಗಿ ನೇಮಕಗೊಂಡು ಮಾಡಿದ ಕೆಲಸಗಳು, ಹೋರಾಟಗಳು ಅಷ್ಟಿಷ್ಟಲ್ಲ. ಹೀಗಾಗಿಯೇ ಕಾಂಗ್ರೆಸ್ ಪಕ್ಷದಲ್ಲಿ ಇವರು ಹಿರಿಯ ನಾಯಕರೆನಿಸಿಕೊಂಡಿದ್ದಾರೆ.

ವಾರ್ಡ್ ನಂಬರ್ 15 ಇದು ಬಿಜೆಪಿಯ ಭದ್ರ ಕೋಟೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಒಮ್ಮೆಯೂ ಗೆಲುವು ಸಾಧಿಸಿಲ್ಲ ಎಂಬ ಮಾತಿದೆ. ಹೀಗಾಗಿ ಅದೇ ವಾರ್ಡಿನಿಂದ ತಮ್ಮ ಮಗ ಅನಿರುದ್ಧ ಅವರನ್ನು ಕಣಕ್ಕಿಳಿಸಿ ಅಲ್ಲಿಂದಲೇ ತಮ್ಮ ಮಗನ ರಾಜಕೀಯ ಭವಿಷ್ಯ ಕಟ್ಟಿಕೊಡಲು ಹೊರಟಿದ್ದಾರೆ ದೀಪಕ. ಕಟ್ಟಡ ನಿರ್ಮಾಣ ಶುಲ್ಕ ಹೆಚ್ಚಳದ ವಿರುದ್ಧ ಧ್ವನಿ ಎತ್ತಿ ಆ ಶುಲ್ಕ ಕಡಿಮಯಾಗುವಂತೆ ಹೋರಾಟ ಮಾಡಿದ್ದ ದೀಪಕ ಅವರು, ಬೀದಿ ವ್ಯಾಪಾರಸ್ಥರು ಹಾಗೂ ಬಡವರ ಬೆನ್ನಿಗೆ ನಿಂತವರು. ದೀಪಕ ಅವರು ಸ್ಪರ್ಧೆ ಮಾಡಿದ್ದ ವಾರ್ಡಿನಲ್ಲಿ ಕೇವಲ 12 ಜನ ಮಾತ್ರ ವಿಪ್ರ ಮತದಾರರಿದ್ದರು. ಆದರೂ ತಮ್ಮ ಕೆಲಸಗಳಿಂದ ಹೆಸರು ಗಳಿಸಿದ್ದ ದೀಪಕ್, ಅದೇ ವಾರ್ಡಿನಿಂದ ಗೆದ್ದು ಬಂದು ಇಲ್ಲಿ ಜಾತಿ ಕೆಲಸ ಮಾಡುವುದಿಲ್ಲ ಅಭಿವೃದ್ಧಿ ಕೆಲಸಗಳು ಶ್ರೀರಕ್ಷೆಯಾಗುತ್ತವೆ ಎಂಬುದನ್ನು ಸಾಬೀತು ಮಾಡಿದ್ದರು. ಇದೀಗ ವಾರ್ಡ್ ನಂಬರ್ 15 ರಿಂದ ತಮ್ಮ ಮಗ ಅನಿರುದ್ಧ ಅವರನ್ನು ಚುನಾವಣಾ ಕಣಕ್ಕಿಳಿಸಿ ತಾವೇ ಚುನಾವಣಾ ಪ್ರಚಾರಕ್ಕೂ ಧುಮಿಕಿದ್ದಾರೆ. ಪ್ರತಿದಿನ ಮಾಳಮಡ್ಡಿ ರೈಲು ನಿಲ್ದಾಣಕ್ಕೆ ವಾಯು ವಿಹಾರಕ್ಕೆಂದು ತೆರಳುವ ದೀಪಕ ಅಲ್ಲಿ ನೂರಾರು ಮತದಾರರನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡುತ್ತಾರೆ. ಅಲ್ಲದೇ ವಾರ್ಡಿಗೆ ಮುಂದಾಗಬೇಕಾದ ಕೆಲಸಗಳ ಬಗ್ಗೆಯೂ ಚರ್ಚಿಸುತ್ತಾರೆ.

ಇನ್ನು ವಾರ್ಡ್ ನಂಬರ್ 15 ರಲ್ಲಿ ದೀಪಕ ಅವರ ಪುತ್ರ ಅನಿರುದ್ಧ ಬಿರುಸಿನ ಪ್ರಚಾರ ನಡೆಸಿದ್ದು, ಪ್ರಸಕ್ತ ವರ್ಷ ಬಿಜೆಪಿ ಭದ್ರಕೋಟೆ ಬೇಧಿಸಿ ಅನಿರುದ್ಧ ಅವರು ಯುದ್ಧ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ. ಅನಿರುದ್ಧ ಯುವ ಉತ್ಸಾಹಿ ನಾಯಕ. ಸಾಕಷ್ಟು ವಿಚಾರಧಾರೆಗಳನ್ನಿಟ್ಟುಕೊಂಡು ತಂದೆಯಂತೆಯೇ ರಾಜಕೀಯಕ್ಕೆ ಧುಮಿಕಿದ್ದಾರೆ. ತಾವು ಸ್ಪರ್ಧೆ ಮಾಡುತ್ತಿರುವ ವಾರ್ಡ್ ನಂಬರ್ 15ರಲ್ಲಿ ಏನೆಲ್ಲ ಕೆಲಸ ಮಾಡಬೇಕು ಎಂದುಕೊಂಡಿದ್ದಾರೆ ಅನ್ನೋದನ್ನ ಸ್ವತಃ ಅನಿರುದ್ಧ ಚಿಂಚೋರೆ ಅವರೇ ಹೇಳ್ತಾರೆ ಕೇಳಿ.

ಕೊರೊನಾ ಲಾಕಡೌನ್ ಸಂದರ್ಭದಲ್ಲಿ ಸಾವಿರಾರು ಬಡ ಕುಟುಂಬಗಳಿಗೆ ದೀಪಕ ಚಿಂಚೋರೆ ಅವರು ಉಚಿತವಾಗಿ ದಿನಸಿ ಕಿಟ್‌ಗಳನ್ನು ವಿತರಿಸಿ ಅವರ ನೆರವಿಗೆ ನಿಂತಿದ್ದಾರೆ. ಕಷ್ಟ ಎಂದು ಮನೆ ಬಾಗಿಲಿಗೆ ಬಂದವರನ್ನು ಬರಿಗೈಯಲ್ಲಿ ಇವರು ವಾಪಸ್ ಕಳುಹಿಸಿಯೇ ಇಲ್ಲ. ದೀಪಕ ಅವರಂತೆಯೇ ಅವರ ಮಗ ಅನಿರುದ್ಧ ಕೂಡ ಉದಾರ ಗುಣ ಹೊಂದಿದವರು. ತಮ್ಮ ವಾರ್ಡಿನ ಜನ ಹಿತ ಕಾಪಾಡಲು ಇದೀಗ ಅನಿರುದ್ಧ ಅನೇಕ ಯೋಜನೆ, ವಿಚಾರಧಾರೆಗಳನ್ನಿಟ್ಟುಕೊಂಡು ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈಗಾಗಲೇ ಚುನಾವಣಾ ಪ್ರಚಾರ ಕೂಡ ಬಿರುಸಿನಿಂದ ನಡೆದಿದ್ದು, ಚುನಾವಣೆಯಲ್ಲಿ ಅನಿರುದ್ಧ ಅವರ ಗೆಲುವು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಏನೇ ಆಗಲಿ ಉತ್ಸಾಹ ಹೊಂದಿ ಬದಲಾವಣೆ ತರಲೇಬೇಕು ಎಂದು ಚುನಾವಣೆ ಎಂಬ ಯುದ್ಧದ ಅಖಾಡಕ್ಕಿಳಿದಿರುವ ಅನಿರುದ್ಧ ಅವರಿಗೆ ಜಯ ಸಿಗಲಿ ಎಂಬುದೇ ನಮ್ಮ ಹಾರೈಕೆ.

Edited By : Shivu K
Kshetra Samachara

Kshetra Samachara

26/08/2021 09:07 am

Cinque Terre

62.33 K

Cinque Terre

7

ಸಂಬಂಧಿತ ಸುದ್ದಿ