ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸೇವಾ ಹಿರಿಮೆ ಮುಂದುವರಿಸಲಿರುವ ಮಂಗಳಮ್ಮ ಮೋಹನ ಹಿರೇಮನಿ

ಹುಬ್ಬಳ್ಳಿ: ವಾರ್ಡ್ ಜನರ ಸರ್ವತೋಮುಖ ಅಭಿವೃದ್ಧಿ ಸೇರಿದಂತೆ ಶೋಷಿತರ, ಬಡವರ ಪರವಾಗಿ ಇಷ್ಟು ದಿನ ಹೋರಾಟ ನಡೆಸಿ ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸುತ್ತಾ ಬಂದಿರುವ ಮೋಹನ್ ಹಿರೇಮನಿ ಅವರು ಇದೀಗ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ 50 ಕ್ಕೆ ತಮ್ಮ ಪತ್ನಿ ಮಂಗಳಮ್ಮ ಮೋಹನ ಹಿರೇಮನಿ ಅವರನ್ನು ಕಣಕ್ಕಿಳಿಸಿದ್ದಾರೆ.

ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಮೋಹನ ಹಿರೇಮನಿ ಅವರು, ಕಳೆದ ಬಾರಿ ಪಾಲಿಕೆ ಸದಸ್ಯರಾಗಿ ಹಳೆಯ ವಾರ್ಡ್ ನಂಬರ್ 45 ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕೊರೋನಾ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಫುಡ್ ಕಿಟ್ ವಿತರಿಸಿ ಬಡವರ ಹಸಿವನ್ನು ನೀಗಿಸಿದ್ದಾರೆ. ಇನ್ನು ಕೊರೋನಾ ಸಂಕಷ್ಟ ಸಮಯವಲ್ಲದೇ ಸದಾ ಕಾಲ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಮೋಹನ್ ಹಿರೇಮನಿ ಹಾಗೂ ಮತ್ತವರ ಕುಟುಂಬ ಒಂದಿಲ್ಲೊಂದು ಕಾರ್ಯ ಮಾಡುತ್ತಲೇ ಇರುತ್ತದೆ. ವಾರ್ಡ್ ನಲ್ಲಿ ಎಲ್ಲಾ ಸಮಾಜದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಕುಟುಂಬದ ಸದಸ್ಯರು, ಯಾವುದೇ ಹಬ್ಬ ಹರಿದಿನಗಳಲ್ಲಿ ಎಲ್ಲರೊಂದಿಗೆ ಬೆರೆತು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಾರೆ.

ಇನ್ನು ವಾರ್ಡ್ ನಲ್ಲಿ ನೀರಿನ ಸಮಸ್ಯೆ, ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಗಾಗಿ ಮುಂದೆ ನಿಂತು ಹೋರಾಟ ಮಾಡಿರುವ ಮೋಹನ ಹಿರೇಮನಿ ಜನರಿಗೆ ಕುಡಿಯಲು ನೀರಿಗಾಗಿ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಿಸಿದ್ದಾರೆ. ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ರಾಟೆ ನೀಡಿದ್ದಾರೆ. ಅಲ್ಲದೇ ವಿಧವಾ ವೇತನ ಸೇರಿದಂತೆ ಇನ್ನಿತರ ಯೋಜನೆಗಳನ್ನು ಜನರ ಮನೆ ಮನೆಗೆ ತಲುಪಿಸಿದ್ದಾರೆ. ಮೋಹನ ಹಿರೇಮನಿಗೆ ಪತ್ನಿ ಮಂಗಳಮ್ಮ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ.

ಇನ್ನೂ ಹಿರೇಮನಿ ಕುಟುಂಬದಿಂದ ಇನ್ನಷ್ಟು ಸಮಾಜಪರವಾದ ಕೆಲಸವಾಗಬೇಕೆಂಬ ದೃಷ್ಟಿಯಿಂದ ವಾರ್ಡ್ ಜನರು ಹಿರೇಮನಿ ಕುಟುಂಬದ ಸೊಸೆ ಮಂಗಳಮ್ಮ ಹಿರೇಮನಿ ಅವರನ್ನು ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಒತ್ತಾಯಿಸಿದ್ದಾರೆ.

ಎಲ್ಲಾ ವಾರ್ಡ್ ನ ಜನರು ಈ ಬಾರಿ ಮಂಗಳಮ್ಮ ಹಿರೇಮನಿ ಅವರಿಗೆ, ಬೆಂಬಲಿಸಿ ವಾರ್ಡ್ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

25/08/2021 10:01 am

Cinque Terre

86.17 K

Cinque Terre

4

ಸಂಬಂಧಿತ ಸುದ್ದಿ