ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಟೋಲ್ ಬಂದ್ ಮಾಡುವ ಉದ್ದೇಶಿತ ಪ್ರತಿಭಟನೆ ಕೈಬಿಟ್ಟ ಶಾಸಕ ನಿಂಬಣ್ಣವರ

ಕಲಘಟಗಿ: ಧಾರವಾಡ-ಅಳ್ನಾವರ-ರಾಮನಗರ ರಾಜ್ಯ ಹೆದ್ದಾರಿ 34 ರ 61.75 ಉದ್ದದ ರಸ್ತೆಯ‌ ನೆನೆಗುದಿಗೆ ಬಿದ್ದಿರುವ ಕಾಮಗಾರಿಯ ಅಭಿವೃದ್ಧಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುದಾನ‌ ನೀಡುವ ಭರವಸೆ ನೀಡಿದ್ದರಿಂದ ಉದ್ದೇಶಿತ ಪ್ರತಿಭಟನೆಯನ್ನು ಹಿಂದೆಪಡೆಯಲಾಗಿದೆ ಎಂದು ಶಾಸಕ ಸಿ ಎಂ ನಿಂಬಣ್ಣವರ ತಿಳಿಸಿದರು.

ಅವರು ನಾಗರೀಕ ಸೇವಾ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,ಶನಿವಾರ ಹುಬ್ಬಳ್ಳಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅವರ ಸ್ವಗ್ರಹದಲ್ಲಿ ವಿ‌ ಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅವರೊಂದಿಗೆ ತಾವು ಭೇಟಿಯಾಗಿ ಅಳ್ನಾವರ ರಾಮನಗರ ರಸ್ತೆ ಅಭಿವೃದ್ಧಿಯಾಗದೇ ಹಾಗೂ ಮೇಲಸೇತುವೆ ನಿರ್ಮಾಣ‌ ಮಾಡದೇ ಕಳೆದ ಹತ್ತು ವರ್ಷಗಳಿಂದ ಕಾಮಗಾರಿ‌ ನೆನೆಗುದಿಗೆ ಬಿದಿರುವ ಕುರಿತು ಮಾಹಿತಿ ನೀಡಲಾಗಿದೆ.ಮುಖ್ಯಮಂತ್ರಿ ಬೊಮ್ಮಾಯಿ ಅವರು ಬೆಂಗಳೂರಿಗೆ ಬನ್ನಿ 14.16 ಕೋಟಿ ರೂ ಅನುದಾನ ಸರಕಾರದ ಪಾಲನ್ನು ತಕ್ಷಣವೇ ಬಿಡುಗಡೆ ಮಾಡಿ,ಕಾಮಗಾರಿ ಪ್ರಾರಂಭಿಸಲು ಆದೇಶಿಸುತ್ತೇನೆ ಎಂದು ನಿಖರ ಭರವಸೆ ನೀಡಿದ್ದರಿಂದ,ದಿ: ಅಗಸ್ಟ 23 ಎಂದು ಅಳ್ನಾವರದಲ್ಲಿ ಸಾರ್ವಜನಿಕರೊಂದಿಗೆ ಟೋಲ್ ಬಂದ್ ಮಾಡುವ ಉದ್ದೇಶಿತ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

22/08/2021 04:47 pm

Cinque Terre

45.45 K

Cinque Terre

2

ಸಂಬಂಧಿತ ಸುದ್ದಿ