ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹು-ಧಾ ಮಹಾನಗರ ಪಾಲಿಕೆ ಚುನಾವಣೆ: ಹುಬ್ಬಳ್ಳಿಯ ಸಿಎಂ ಬೊಮ್ಮಾಯಿ ಮನೆಗೆ ದೌಡಾಯಿಸಿದ ನಾಯಕರು

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಾವು ಏರುತ್ತಿದೆ. ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆ ದಿನವಾಗಿದೆ. ಆದರೂ ಶಿಸ್ತಿನ‌ಪಕ್ಷ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಪೈಪೋಟಿ ಮುಂದುವರೆದಿದ್ದು, ಯಾರಿಗೆ ಟಿಕೆಟ್ ಕೊಡಬೇಕು ಬಿಡಬೇಕು ಎಂದು ಚಿಂತೆ ಪಕ್ಷದ ನಾಯಕರಿಗೆ ಕಾಡುತ್ತದೆ.

ಹೀಗಾಗಿ‌ ಟಿಕೆಟ್ ಗಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಬೆಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಅರವಿಂದ ಬೆಲ್ಲದ ಭೇಟಿಯಾಗಿ ಮಾತುಕತೆ ನಡೆಸಿದರು.‌ ಇವರಲ್ಲದೇ ಮಾಜಿ ಮೇಯರ್ ವೀರಣ್ಣ ಸವಡಿ ಅವರಿಗೆ ಎರಡನೇ ಪಟ್ಟಯಲ್ಲಿ ಟಿಕೆಟ್ ಪಕ್ಕಾ ಆಗಿದೆ.‌ ಇಲ್ಲಿಯವರೆ ತಿಪ್ಪಣ್ಣ ಮಜ್ಜಗಿ, ಲಕ್ಷ್ಮೀ ಉಪ್ಪಾರ, ಮಾಜಿ ಮೇಯರ್ ವಿಜಯಾನಂದ ಹೊಸಕೋಟ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ರಾಜಣ್ಣ ಕೊರವಿ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಹೀಗಾಗಿ ಈ ನಾಯಕರು ಸಿಎಂ ಭೇಟಿಯಾಗಿ ಮಹಾನಗರ ಪಾಲಿಕೆ ಚುನಾವಣೆ‌ ಟಿಕೆಟ್ ಗಾಗಿ ಸಿಎಂ ಗೆ ದುಂಬಾಲು ಬಿದಿದ್ದಾರೆ.

ಆದರೆ ಈ ಬಾರಿ ವಾರ್ಡ್ ಗಳು ಹೆಚ್ಚಳ ಹಾಗೂ ಮೀಸಲಾತಿ ಬದಲಾವಣೆಯಿಂದ ಅನೇಕರು‌ ಟಿಕೆಟ್ ವಂಚಿತರಾಗುವ ಸಂಭವವಿದ್ದು, ಹೇಗಾದರು ಮಾಡಿ‌ ಸಿಎಂ ಸಹಾಯದಿಂದ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ. ಇನ್ನೂ ಇದೇ ವಿಷಯವಾಗಿ ಸಿ ಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅರವಿಂದ ಬೆಲ್ಲದ ಮಾಧ್ಯಮಕ್ಕೆ ಪ್ರತಿಕ್ರಿಯಿಸದೆ ಮರಳಿದ್ದು, ಬಿಜೆಪಿ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ ಎನ್ನಲಾಗಿದೆ.

ಸಾರ್ವಜನಿಕರಿಂದ ಹಲವಾಲು ಸ್ವೀಕಾರ..

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಹುಬ್ಬಳ್ಳಿ ವಿಶ್ವೇಶ್ವರನಗರದ ನಿವಾಸಕ್ಕೆ ಆಗಮಿಸಿರುವದನ್ನು ಅರಿತ ಸಾಕಷ್ಟು ‌ಜನರು ಮನೆಯತ್ತ ಜಮಾವಣೆಗೊಂಡಿದ್ದರು. ಈ ಸಂದರ್ಭದಲ್ಲಿ ಸಿಎಂ ಸಾರ್ವಜನಿಕರಿಂದ ಹಲವಾಲು ಸ್ವೀಕರಿಸಿದರು.

Edited By : Nagesh Gaonkar
Kshetra Samachara

Kshetra Samachara

21/08/2021 10:51 pm

Cinque Terre

82.85 K

Cinque Terre

1

ಸಂಬಂಧಿತ ಸುದ್ದಿ