ಹುಬ್ಬಳ್ಳಿ- ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ, ದಿನದಿಂದ ದಿನಕ್ಕೆ ರಂಗೇರುತ್ತಿದೆ, ಅದರಂತೆ ವಾರ್ಡ್ ನಂಬರ್ 28 ರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ, ಡಾ.ವಿಜಯ್ ಕುಮಾರ್ ಅಪ್ಪಾಜಿ ಅವರು, ಈಗಾಗಲೆ ಜನರ ಸಂಕಷ್ಟ ಹಾಗೂ ಹಲವಾರು ಬೇಡಿಕೆಗಳನ್ನು ಈಡೇರಿಸುವ ಕುರಿತು, ಗಾಮನಗಟ್ಟಿ ಗ್ರಾಮದಲ್ಲಿ ಇಂದು ಸಭೆ ನಡೆಸಿ, ಜನರ ಅಭಿಪ್ರಾಯ ಸಂಗ್ರಹಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ನಮ್ಮ ಬೆಂಬಲ ನಿಮಗೆ ಇದೆ. ನೀವೂ ಕೊರೊನಾ ಸಂದರ್ಭದಲ್ಲಿ ನಮಗೆ ಹಸಿವು ನೀಗಿಸುವ ಕೆಲಸ ಮಾಡಿದ್ದಿರಿ. ಆದ್ದರಿಂದ ನಿಮಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಬೆಂಬಲಿಗರು ಭಾಗಿಯಾಗಿದ್ದರು.
Kshetra Samachara
20/08/2021 07:04 pm