ಹುಬ್ಬಳ್ಳಿ: ಸಹೋದರನಿಗೆ ಜಾಮೀನು ಸಿಕ್ಕಿದ್ದು ಬಹಳ ಖುಷಿಯಾಗಿದೆ. ಹಿಂಡಲಗಾ ಜೈಲಿನಿಂದ ಹೊರಗಡೆ ಬರ್ತಾರೆ. ಬೆಳಗಾವಿಯಿಂದ ಸವದತ್ತಿಗೆ ಹೋಗ್ತಾರೆ ಎಂದು ವಿನಯ್ ಸಹೋದರ ವಿಜಯ್ ಕುಲಕರ್ಣಿ ಹೇಳಿದ್ದಾರೆ.
ಸಹೋದರನಿಗೆ ಜಾಮೀನು ಸಿಕ್ಕಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಹಳ ದಿನಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೆವು. ಅವರಿಗೆ ಕೆಲ ಷರತ್ತು ವಿಧಿಸಿ ಜಾಮೀನು ಸಿಕ್ಕಿದೆ. ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಹೀಗಾಗೇ ಬೆಂಗಳೂರಿನಲ್ಲಿ ಇರ್ತಾರೆ. ಅವರ ರಾಜಕೀಯ ಹಿನ್ನಡೆ ಆಯಿತು ಎನ್ನೋರು ಸ್ವಲ್ಪ ಕಾಯಬೇಕು ಎಂದು ವಿನಯ್ ವಿರೋಧಿಗಳಿಗೆ ತೀರುಗೇಟು ನೀಡಿದರು.
ವಿನಯ ಕುಲಕರ್ಣಿ ಅವರು ಸಕ್ರಿಯ ರಾಜಕೀಯಲ್ಲಿ ಇರ್ತಾರೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಎಲೆಕ್ಷನ್ ನಲ್ಲಿ ತೊಡಿಗಿಸಿಕೊಳ್ತಾರೆ. ಸಿಬಿಐ ತನಿಖೆಗೆ ನಾವು ಸಹಕಾರ ನೀಡಿದ್ವಿ. ಅವೆಲ್ಲಾ ವಿಚಾರಣೆ ನಡೆಸಿಯೇ ನ್ಯಾಯಲಯ ಜಾಮೀನು ನೀಡಿದೆ. ನಮಗೆಲ್ಲಾ ಬಹಳ ಖುಷಿಯಾಗಿದೆ ಎಂದರು.
Kshetra Samachara
20/08/2021 02:41 pm