ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಚುನಾವಣೆ ಅಭ್ಯರ್ಥಿಗಳ ಕಸರತ್ತು ಜೋರಾಗಿ ನಡೆದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ತಮ್ಮ ನೆಚ್ಚಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಹಾಗೂ ಟಿಕೆಟ್ ನೀಡುವಂತೆ ನಾಯಕರಿಗೆ ಒತ್ತಾಯಿಸುತ್ತಿದ್ದಾರೆ.
ಹೌದು. ವಾರ್ಡ್ 43ರಲ್ಲಿ ಸುಮಾರು ವರ್ಷಗಳಿಂದ ಸಾಮಾನ್ಯ ಸ್ಥಾನ ಬಂದಿರಲಿಲ್ಲ. ಈ ಬಾರಿಗೆ ಸಾಮಾನ್ಯ ಸ್ಥಾನ ಮೀಸಲಾತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಯುವ ಮುಖಂಡ ಮಂಜುನಾಥ ಹಳ್ಯಾಳ ಅವರಿಗೆ ಭಾರತೀಯ ಜನತಾ ಪಕ್ಷದ ಟಿಕೆಟ್ ನೀಡುವಂತೆ ಮಂಜುನಾಥ ಹಳಿಯಾಳ ಬೆಂಬಲಿಗರು ಹಾಗೂ ವಾರ್ಡ್ ನಂಬರ 43 ರ ಮುಖಂಡರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಮಾಡಿ ಒತ್ತಾಯಿಸಿದರು.
ಸುಮಾರು ವರ್ಷಗಳಿಂದ ಸಾಮಾನ್ಯ ಸ್ಥಾನ ಬಂದಿಲ್ಲ. ಆಗ ಎಸ್.ಸಿ, ಎಸ್.ಟಿ, ಓಬಿಸಿ ಮೀಸಲಾದ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನೀಡಲಾಗಿದೆ. ಈ ಬಾರಿಗೆ ಸಾಮಾನ್ಯ ಸ್ಥಾನ ಬಂದಿರುವುದರಿಂದ ಮಂಜುನಾಥ ಹಳ್ಯಾಳ ಅವರಿಗೆ ನೀಡಬೇಕು ಎಂದು ಮಂಜುನಾಥ ಹಳ್ಯಾಳ ಬೆಂಬಲಿಗರು ಹಾಗೂ ವಾರ್ಡ್ ಮುಖಂಡರು ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.
Kshetra Samachara
17/08/2021 08:45 pm