ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆ-2021 ಕ್ಕೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕಾಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸದಾಚಾರ ಸಂಹಿತೆಯನ್ನು ಜಾರಿಗೊಳಿಸಲು ನಿರ್ದೇಶಿಸಲಾಗಿದೆ.
ಮಹಾನಗರ ಪಾಲಿಕೆ ವಾರ್ಡ್‌ಗಳಿಗೆ ಸಂಬಂಧಿಸಿದಂತೆ ಸ್ಪರ್ಧಿಸುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಸದಾಚಾರ ಸಂಹಿತೆ ಜಾರಿಗೊಳಿಸಲಾಗಿದ್ದು, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆಯ ಪಾಲನೆ ಕುರಿತು ನಿಗಾವಹಿಸಿ ಉಲ್ಲಂಘನೆ ಕಂಡು ಬಂದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ವಹಿಸಲು ಸದಾಚಾರ ಸಂಹಿತೆ ಸಮಿತಿಯನ್ನು ರಚಿಸಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಆದೇಶಿಸಿದ್ದಾರೆ.
ಸದಾಚಾರ ಸಂಹಿತೆ ಸಮಿತಿ ವಿವರ: ವಾರ್ಡ್ ನಂ.1 ರಿಂದ 10 ರ ವ್ಯಾಪ್ತಿಯಲ್ಲಿ ರಾಘವೇಂದ್ರ ಬಮ್ಮಿಗಟ್ಟಿ (8277931274), ಎಸ್.ಕೆ ಜಿಣಗಿ (94489042939), ಸಿ.ಯು. ಚಲವಾದಿ (9632340417) ಮತ್ತು ಲಿಯಾಕತ್ ಅಲಿ ಅಲಾಮಸಾ ಸವಣೂರ (8746063714).
ವಾರ್ಡ್ ನಂ. 11 ರಿಂದ 20 ರ ವ್ಯಾಪ್ತಿಯಲ್ಲಿ ವಿ.ಜಿ. ಹಿರೇಮಠ (9901421363), ಎಂ.ಡಿ. ನದಾಫ (7411058845), ಎಸ್.ಎನ್. ಪುಟ್ಟಣ್ಣವರ (9886031559) ಮತ್ತು ಕರಿಯಲ್ಲಪ್ಪ ಯೇರೆಶಿಮಿ (9844570424).
ವಾರ್ಡ್ ನಂ.21 ರಿಂದ 30 ರ ವ್ಯಾಪ್ತಿಯಲ್ಲಿ ರಮೇಶ ದೊಡ್ಡಮನಿ (9916190345), ಎಸ್.ಎಸ್ ಮುಜಾರ (8073250286), ಬಿ.ವಿ ಇಸರಿ(9448236229) ಮತ್ತು ರವಿ ವಿಷ್ಣು ಮುಧೋಳ್ಕರ (9980166162).
ವಾರ್ಡ್ ನಂ.31 ರಿಂದ 40 ರ ವ್ಯಾಪ್ತಿಯಲ್ಲಿ ನಟೇಶ .ಹೆಚ್.ಟಿ. (9902821359), ಸಿದ್ಧಪ್ಪ ಕಮ್ಮಾರ (81478839177) ಮತ್ತು ಎಸ್.ಎಸ್. ಉಳ್ಳಿಗೇರಿ (7019067020).
ವಾರ್ಡ್ ನಂ.41 ರಿಂದ 51 ರ ವ್ಯಾಪ್ತಿಯಲ್ಲಿ ವಿಜಯಕುಮಾರ ಮಡಿವಾಳಪ್ಪ (8867495018), ಕೇಶವ .ವಿ. ಕಮ್ಮಾರ (9945516986), ವಿ.ಎಸ್. ರಾಯಾಪುರ (9900520727) ಮತ್ತು ಆರ್.ಆರ್. ಏರಿಮನಿ (9448272487).
ವಾರ್ಡ್ ನಂ. 52 ರಿಂದ 61 ರ ವ್ಯಾಪ್ತಿಯಲ್ಲಿ ವಿ.ವಾಯ್.ರಾಗಿ, ವಿ.ಬಿ. ಕಮಡೊಳ್ಳಿ (9448923006), ಸಿ.ಎಸ್. ದಿಂಡಿಲಕೊಪ್ಪ (9448730100) ಮತ್ತು ಮಾರುತಿ ಪಮ್ಮಾರ (9611251241).
ವಾರ್ಡ್ ನಂ. 62 ರಿಂದ 71 ರಲ್ಲಿ ರಾಜೇಂದ್ರ ಹುರಕಡ್ಲಿ (9980516931), ಜೆ.ವಿ. ಆಲದಕಟ್ಟಿ (9880057380), ಎಮ್.ಬಿ. ಪತ್ತಾರ (9449063541) ಮತ್ತು ಪ್ರವೀಣ ಅವರಾದ (9538550822).
ವಾರ್ಡ್ ನಂ.72 ರಿಂದ 82 ರ ವ್ಯಾಪ್ತಿಯಲ್ಲಿ ಎಸ್.ಆರ್. ವೀರಕರ (8277071511), ಎಸ್.ಜಿ. ಕಲಾಲ (9902670035), ಡಿ.ಎನ್.ಪಾಟೀಲ (9986964520) ಮತ್ತು ನವೀನ್‍ಕುಮಾರ ಹೆಚ್.ಎನ್. (9844864920).
ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರವನ್ನು ಕೈಗೊಳ್ಳುವಾಗ ಸದಾಚಾರ ಸಂಹಿತೆ ಉಲ್ಲಂಘನೆ ಮಾಡಿದ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಸದಾಚಾರ ಸಂಹಿತ ಸಮಿತಿಯ ಅಧಿಕಾರಿಗಳು ಅಗತ್ಯ ಕ್ರಮ ಜರುಗಿಸಬೇಕು. ಮತ್ತು ರಾಜ್ಯ ಚುನಾವಣಾ ಆಯೋಗವು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಸಮಿತಿಯು ಚುನಾವಣಾ ವೇಳಾಪಟ್ಟಿಗೆ ಅನುಗುಣವಾಗಿ ಕಾರ್ಯ ಪ್ರವೃತ್ತರಾಗಿ, ಪ್ರಕ್ರಿಯೆ ಮುಗಿಯುವವರೆಗೆ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Kshetra Samachara
17/08/2021 06:55 pm