ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್‌ಕುಮಾರ ಕಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೆಲ್ಲಿ ಬಿಜೆಪಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ಮಧ್ಯೆ ಪೈಪೋಟಿ ನಡೆದಿದೆಯೋ ಅಲ್ಲೆಲ್ಲ ನಮ್ಮ ಬಿಜೆಪಿ ಪಕ್ಷ ಬಲವಾಗಿ ಬೆಳೆದಿದೆ ಎಂದರ್ಥ. ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಜೆಪಿ ಸಾಕಷ್ಟು ಸಂಘಟನೆಯಾಗಿದೆ. ಆಕಾಂಕ್ಷಿಗಳಿಗೆ ಟಿಕೆಟ್ ಸಿಗದೇ ಇದ್ದಾಗ ನೋವಾಗುವುದು ಸಹಜ. ಆದರೆ, ಬಿಜೆಪಿಯಲ್ಲಿ ಅದನ್ನೆಲ್ಲ ಮರೆತು ಕೆಲಸ ಮಾಡುತ್ತಾರೆ ಎಂದರು.
Kshetra Samachara
16/08/2021 09:38 pm