ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಲಿಕೆ ಚುನಾವಣೆ : ಕಾಂಗ್ರೆಸ್ ಟಿಕೆಟ್ ಗೆ ಭಾರಿ ಪೈಪೋಟಿ

ಹುಬ್ಬಳ್ಳಿ : ಹು.ಧಾ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದಂತೆ ರಾಜಕೀಯ ಚಟುವಟಿಕಗೆಳು ಬಿರುಸುಗೊಳ್ಳ ತೊಡಗಿವೆ. ಸಧ್ಯದ ಬೆಳವಣಿಗೆಯನ್ನು ನೋಡಲಾಗಿ ಬಿಜೆಪಿಗಿಂತ ಕಾಂಗ್ರೆಸ್ಸ್ ಪಕ್ಷದಲ್ಲಿ ಟಿಕೆಟ್ ಗಾಗಿ ಭಾರಿ ಪೈಪೋಟಿ ನಡೆದಿದೆ ಎನ್ನಬಹುದು.

ಈ ಬಾರಿ ಪಾಲಿಕೆಯನ್ನು ಕೈವಶ ಮಾಡಿಕೊಳ್ಳಲೇ ಬೇಕೆಂಬ ಪಣ ತೊಟ್ಟಿರುವ ಕಾಂಗ್ರೆಸ್ ಗೆಲ್ಲವು ಅವಕಾಶವನ್ನು ಕಳೆದುಕೊಳ್ಳಲು ಸಿದ್ದವಿಲ್ಲ.

ಈ ಬಾರಿಯ ಇನ್ನೊಂದು ವಿಶೇಷವೆಂದರೆ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚು ಅವಕಾಶ ಸಿಕ್ಕಿರುವುದು. ಹೀಗಾಗಿ ಪಕ್ಷೇತರ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿಯುವ ಲಕ್ಷಣಗಳು ಕಂಡು ಬರುತ್ತಿವೆ. ಕೆಲವರು ಈಗಾಗಲೆ ಗ್ರೌಂಡ ವರ್ಕ ಆರಂಭಿಸಿದ್ದು ತಮ್ಮ ವಾರ್ಡಿನ ಮತದಾರರ ಸಂಪರ್ಕ ಆರಂಭಸಿದ್ದಾರೆ.

ಕಾಂಗ್ರೆಸ್ ಟಿಕೆಟ್ ಗಾಗಿ 300 ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ ಬಹುತೇಕ ಆಕಾಂಕ್ಷಿಗಳು ತಮ್ಮ ತಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ ಭೇಟಿಗಾಗಿ ಬೆಂಗಳೂರಿಗೆ ತೆರಳಲು ಸಜ್ಜಾಗಿದ್ದಾರೆ.

ಇತ್ತೀಚಿನ ಬೆಳವಣಿಗೆ ನೋಡಿದಾಗ ಅವಳಿ ನಗರದ ಕಾಂಗ್ರೆಸ್ ಪಕ್ಷದಲ್ಲಿ ಈ ಇಬ್ಬರೂ ನಾಯಕರ ಬೆಂಬಲಿಗರ ಪ್ರತ್ಯೇಕ ಗುಂಪುಗಳಾಗಿದ್ದು, ತಮ್ಮ ನಾಯಕ ಮೇಲೆ ಒತ್ತಡ ತಂದು ಟಿಕೆಟ್ ಪಡೆಯುವ ಹವಣಿಕೆಯಲ್ಲಿದ್ದಾರೆ ಬಹುತೇಕ ಆಕಾಂಕ್ಷಿಗಳು. ಇದು ಮುಂದೆ ಗೊಂದಲಕ್ಕೂ ಕಾರಣವಾಗಬಹುದು.

ಇನ್ನು ಧಾರವಾಡ ವಾರ್ಡುಗಳ ಟಿಕೆಟೆ ಹಂಚಿಕೆ ಜವಾಬ್ದಾರಿಯನ್ನು ಪಕ್ಷದ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ್, ಮಾಜಿ ಮೇಯರ್ ದೀಪಕ್ ಚಿಂಚೋರೆ ಹಾಗೂ ಇಸ್ಮಾಯಿಲ್ ತಮಾಟಗಾರ ಅವರಿಗೆ ವಹಿಸಿಲಾಗಿದ್ದು ,ಈ ಮೂವರೂ ನಾಯಕರ ಗೌಪ್ಯವಾಗಿ ಸಭೆ ನಡೆಸಿ ಆಕಾಂಕ್ಷೆಗಳನ್ನು ಭೇಟಿಯಾಗುತ್ತಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಸಭೆ ನಡೆಸಿದೆಯಾದರೂ ಈ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂದು ಹೇಳಬಹುದು. ಇನ್ನು ಆಮ್ ಆದ್ಮಿ ಪಾರ್ಟಿಯಲ್ಲಿ ಚಟುವಟಿಕೆ ಕಂಡು ಬರುತ್ತಿದ್ದರೂ ಸ್ಪಷ್ಟ ಚಿತ್ರಣವಿಲ್ಲ.

Edited By :
Kshetra Samachara

Kshetra Samachara

16/08/2021 12:27 pm

Cinque Terre

15.11 K

Cinque Terre

0

ಸಂಬಂಧಿತ ಸುದ್ದಿ