ಹುಬ್ಬಳ್ಳಿ: ಅದು ಅವಳಿನಗರದ ಬಹುನಿರೀಕ್ಷಿತ ಚುನಾವಣೆ. ಚುನಾವಣೆ ನಿಗದಿಯಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಶತಾಯು ಗತಾಯು ಹೋರಾಟ ನಡೆಸುತ್ತಿವೆ. ಈಗಾಗಲೇ ಕೈ ಮತ್ತು ಕಮಲ ಪಾಳೆಯದಲ್ಲಿ ಕಾರ್ಯ ಚಟುವಟಿಕೆ ಚುರುಕುಗೊಂಡಿದೆ. ಪಾಲಿಕೆ ಕೈ ವಶ ಮಾಡಿಕೊಳ್ಳಲು ಕಾಂಗ್ರೆಸ್ ಸರ್ಕಸ್ ನಡೆಸಿದ್ದರೇ. ಕಮಲ ಪಡೆ ಪಾಲಿಕೆಯ ಕಮಲವನ್ನು ಮುಡಿಗೇರಿಸಿಕೊಳ್ಳಲು ಸನ್ನದ್ಧವಾಗಿದೆ.
ಮಹಾನಗರ ಪಾಲಿಕೆ ಚುನಾವಣೆ ನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ಕಳೆದೆರಡು ಅವಧಿ ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ಪಡೆಯಬೇಕೇಂಬ ತೀರ್ಮಾನಕ್ಕೆ ಬಂದಿದ್ದು, ಮಾಜಿ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಪ್ರತ್ಯೇಕ ಚುನಾವಣಾ ಸಮಿತಿ ರಚಿಸಿದೆ. ಮಾಜಿ ಸಚಿವರಾದ ತನ್ವೀರ ಸೇಠ, ಶಿವಾನಂದ ಪಾಟೀಲ ಈ ಸಮಿತಿಯಲ್ಲಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಆರ್.ಧ್ರುವ ನಾರಾಯಣ ಸಂಚಾಲಕರಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ಮೊದಲ ದಿನವೇ 200ಕ್ಕೂ ಹೆಚ್ಚು ಜನ ಆಕಾಂಕ್ಷಿಗಳು ಅರ್ಜಿ ಪಡೆದಿದ್ದು, ದಿ. 16ರಂದು ಮೊದಲ ಚುನಾವಣಾ ಸಮಿತಿ ಸಭೆ ಹುಬ್ಬಳ್ಳಿಯಲ್ಲೇ ನಡೆಯಲಿದೆ.
ಇನ್ನೂ ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಕಮಲ ಬಾವುಟ ಹಾರಿಸಿರುವ ಬಿಜೆಪಿ ಪಾಲಿಕೆಯ ಅಧಿಕಾರವನ್ನು ಪಡೆಯಲು ಶತಾಯು ಗತಾಯು ಹೋರಾಟ ನಡೆಸಿದ್ದು, ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹಾಗೂ ನೂತನ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರನ್ನು ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಿದ್ದು, ಉಸ್ತುವಾರಿಗಳ ಪ್ರಭಾವದ ಮೇಲೆ ಈ ಬಾರಿ ಚುನಾವಣೆ ನಡೆಯಲಿದ್ದು, ಯಾವ ಹೂವು ಯಾರ ಮುಡಿಗೋ ಕಾದು ನೋಡಬೇಕಿದೆ.
ಮಲ್ಲೇಶ ಸೂರಣಗಿ,
ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
14/08/2021 04:08 pm