ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಮಂಜೂರಾಗುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸುವುದರ ಜೊತೆಗೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್‌ನಲ್ಲಿ ವಿನಯ್ ಅವರ ವಿವಿಧ ವೀಡಿಯೋಗಳನ್ನು ಮಾಡಿ ಹರಿಬಿಡುವ ಮೂಲಕ ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ನ.5 ರಂದು ಯೋಗೀಶಗೌಡ ಗೌಡರ ಕೊಲೆ ಪ್ರಕರಣದಡಿ ವಿನಯ್ ಬಂಧಿತರಾಗಿದ್ದರು. ಇಂದು ಸುಪ್ರೀಂಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ವಿನಯ್ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ ಮೂಡುವಂತೆ ಮಾಡಿದೆ. ಧಾರವಾಡ ಸೇರಿದಂತೆ ಗ್ರಾಮಾಂತರ ಪ್ರದೇಶದ ಅನೇಕ ಹಳ್ಳಿಗಳಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇದರ ಜೊತೆಗೆ ಫೇಸ್ಬುಕ್‌ನಲ್ಲೂ ವಿನಯ್ ಅವರ ಫೋಟೋ ಹಾಕಿ ಅವುಗಳಿಗೆ ಡೈಲಾಗ್ ಹಾಗೂ ಹಾಡು ಹಾಕಿ ಅವುಗಳನ್ನು ಹರಿಬಿಡುತ್ತಿದ್ದಾರೆ. ಇಂದು ಫೇಸ್ಬುಕ್‌ನಲ್ಲಿ ವಿನಯ್ ಅವರದ್ದೇ ಹವಾ ಸೃಷ್ಟಿಯಾಗಿದೆ.
ಹಾಲಿ ಶಾಸಕ ಅಮೃತ ದೇಸಾಯಿ ಅವರ ಫೋಟೋ ಜೊತೆಗೆ ಮಾಜಿ ಆಗಿರುವ ವಿನಯ್ ಕುಲಕರ್ಣಿ ಅವರ ಫೋಟೋವನ್ನೂ ಹಾಕಿ ಅದಕ್ಕೆ ಬೇರೆ ಬೇರೆ ರೀತಿಯ ಡೈಲಾಗ್ ಸೇರಿಸಿ ಅಂತಹ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಬಿಡಲಾಗುತ್ತಿದೆ.
Kshetra Samachara
11/08/2021 08:40 pm