ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿನಯ್ ಅಭಿಮಾನಿಗಳು ಧಾರವಾಡದ ಕೆಲಗೇರಿಯಲ್ಲಿರುವ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಮಾಡಿಸಿದರು.
ವಿನಯ್ ಅವರ ಭಾವಚಿತ್ರ ಹಿಡಿದುಕೊಂಡೇ ಕಲ್ಮೇಶ್ವರನಿಗೆ ಹಾಲಿನ ಅಭಿಷೇಕ ಮಾಡಿಸಿರುವ ಅವರ ಅಭಿಮಾನಿಗಳು, ವಿನಯ್ ಅವರ ಅಜ್ಞಾತವಾಸ ಶ್ರಾವಣ ಮಾಸದಂದು ಮುಕ್ತಾಯಗೊಂಡಿದೆ ಎಂದರು.
ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಶಕ್ತಿ ಎಂದರೆ ಅದು ವಿನಯ್ ಕುಲಕರ್ಣಿ. ಯಾರದ್ದೋ ಕೆಟ್ಟ ಕಣ್ಣಿನಿಂದ ಇಷ್ಟು ದಿನ ವಿನಯ್ ಅವರು ಅಜ್ಞಾತವಾಸ ಅನುಭವಿಸುವಂತಾಯಿತು. ಇಂದಿಗೆ ಅವರ ಕಷ್ಟಗಳೆಲ್ಲ ಪರಿಹಾರವಾಗಿದ್ದು, ಮುಂಬರುವ ದಿನಗಳಲ್ಲಿ ಅವರು ದೊಡ್ಡ ಶಕ್ತಿಯಾಗಿ ಬೆಳೆಯುವಂತಾಗಲಿ ಎಂದು ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದರು.
Kshetra Samachara
11/08/2021 08:03 pm