ಹುಬ್ಬಳ್ಳಿ: ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿ ಬಾ.ಪುಲೆ ಮಹಿಳಾ ಸಂಘಟನೆ ಹುಬ್ಬಳ್ಳಿ ಘಟಕ ಹೋರಾಟ ವತಿಯಿಂದ, ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ನೇಕಾರ ನಗರದ ಬಿಜಾಪೂರ ಹಾಲ್‌ದಲ್ಲಿ, ಸ್ಲಂ ಜನರ ಕೂಗು ಕೇಳಿ ಎಂಬ ಪುಸ್ತಕವನ್ನು ಶಾಸಕ ಪ್ರಸಾದ್ ಅಬ್ಬಯ್ಯ ಬಿಡುಗಡೆಗೊಳಿಸಿದರು.
ನಗರದಲ್ಲಿ ಹಲವಾರು ಸ್ಲಂ ನಿವಾಸಿಗಳಿಗೆ ಯಾವುದೇ ನಿವೇಶನ ಇಲ್ಲದೇ ಪರದಾಡುತ್ತಿದ್ದು, ಆದ್ದರಿಂದ ಅಂತಹವರಿಗೆ ನಿವೇಶನ ನೀಡುವಂತೆ ಸರಕಾರ ಒತ್ತಾಯ ಮಾಡುವ ಉದ್ದೇಶದಿಂದ, ಸ್ಲಂ ಜನರ ಕೂಗು ಕೆಳಲಿ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಇನ್ನೂ ಕಾರ್ಯಕ್ರಮದಲ್ಲಿ, ಶಾಸಕ ಪ್ರಸಾದ್ ಅಬ್ಬಯ್ಯ, ಎಸ್ ವಿ ಹಿರೇಮಠ, ನಾಗರಾಜ ಎಚ್.ವಿಮಲ್ ಎಸ್.ತಾಳಿಕೋಟಿ, ಕಿರಣ ಪಾಟೀಲ, ಎ.ನರಸಿಂಹ ಮೂರ್ತಿ ಸ್ಲಂ ಆಂದೋಲನ ರಾಜ್ಯ ಸಂಚಾಲಕ, ಶೋಭಾ ಕಮತರ ಸೇರಿದಂತೆ ಇನ್ನಿತರರು ಇದ್ದರು.
Kshetra Samachara
08/08/2021 05:29 pm