ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೆಲ್ಲದ ಸಮಾಧಾನವಾಗಿಯೇ ಇದ್ದಾರೆ: ಸಚಿವ ಮುನೇನಕೊಪ್ಪ

ಧಾರವಾಡ: ಅರವಿಂದ ಬೆಲ್ಲದ ಅವರನ್ನು ಸಮಾಧಾನಪಡಿಸುವ ಪ್ರಶ್ನೆಯೇ ಇಲ್ಲ. ಏಕೆಂದರೆ ಅಸಮಾಧಾನಗೊಂಡಿಲ್ಲ. ಅವರು ಸಮಾಧಾನವಾಗಿಯೇ ಇದ್ದಾರೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ ಪಾಲ್ಗೊಳ್ಳದೇ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬೆಲ್ಲದ ನನ್ನ ಸ್ನೇಹಿತರು ಅವರೊಂದಿಗೆ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರೊಂದಿಗೆ ನಾನು ಮಾತನಾಡಿದ್ದೇನೆ. ಅವರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರಿಂದ ಸಭೆಗೆ ಬಂದಿಲ್ಲ. ಮುಂದಿನ ಸಭೆಯಲ್ಲಿ ಬೆಲ್ಲದ ಅವರು ನಮ್ಮೊಂದಿಗೆ ಇರುತ್ತಾರೆ ಎಂದರು.

ಇಲ್ಲಿ ಅಧಿಕಾರ ಮುಖ್ಯವಲ್ಲ. ಅಭಿವೃದ್ಧಿ ಕೆಲಸ ಮುಖ್ಯ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲ ಶಾಸಕರು ಒಟ್ಟಾಗಿ ಕೆಲಸ ಮಾಡುತ್ತೇವೆ. ಸಭೆಗಳು ನಡೆದಾಗ ಜನಪ್ರತಿನಿಧಿಗಳಾದ ನಾವು ಪಾಲ್ಗೊಳ್ಳುವುದು ಮುಖ್ಯ. ಏಕೆಂದರೆ ಅಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕಾಗುತ್ತದೆ ಎಂದರು.

ಸಚಿವನಾದ ಬಳಿಕ ಇದೇ ಮೊದಲ ಬಾರಿಗೆ ಕೊರೊನಾ ಹಾಗೂ ನೆರೆ ಪ್ರವಾಹದ ಬಗ್ಗೆ ಸಭೆ ತೆಗೆದುಕೊಂಡಿದ್ದೇನೆ. ಅನೇಕ ವಿಚಾರಗಳು ಹಾಗೂ ನೆನೆಗುದಿಗೆ ಬಿದ್ದ ಅನೇಕ ಕಾಮಗಾರಿಗಳಿವೆ ಅವುಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಪೂರ್ಣ ಮಾಹಿತಿ ತೆಗೆದುಕೊಂಡು ಒಂದು ವಾರದಲ್ಲಿ ಎಲ್ಲವನ್ನೂ ಮಾಧ್ಯಮದ ಮುಂದೆ ಇಡುತ್ತೇನೆ ಎಂದರು.

ಜಿಲ್ಲಾ ಕೇಂದ್ರ ಧಾರವಾಡದಲ್ಲೂ ಜನ ಸಂಪರ್ಕ ಕಚೇರಿ ತೆರೆದು ಜನರಿಗೆ ಸ್ಪಂದಿಸುವ ಕೆಲಸ ಮಾಡತ್ತೇನೆ ಎಂದರು.

Edited By : Nagesh Gaonkar
Kshetra Samachara

Kshetra Samachara

07/08/2021 04:36 pm

Cinque Terre

26.17 K

Cinque Terre

1

ಸಂಬಂಧಿತ ಸುದ್ದಿ