ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೈತಪ್ಪಿದ ಸಚಿವ ಸ್ಥಾನ: ಸಚಿವರ ಸ್ವಾಗತಕ್ಕೆ ಆಗಮಿಸದ ಬಿಜೆಪಿ ಜಿಲ್ಲಾಧ್ಯಕ್ಷ ಬೆಲ್ಲದ...!

ಹುಬ್ಬಳ್ಳಿ: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟಗಳಲ್ಲಿ ಸಚಿವ ಸ್ಥಾನ‌ ಕೈತಪ್ಪಿರುವ ಅಸಮಾಧಾನ ಇನ್ನೂ ಹಸಿರಾಗಿದೆ. ಹೌದು.. ಧಾರವಾಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಅರವಿಂದ ಬೆಲ್ಲದ ನಡೆ ಇದಕ್ಕೆ ಪುಷ್ಟಿ ನೀಡಿದೆ.

ನೂತನ ಸಚಿವರಾಗಿ ಹುಬ್ಬಳ್ಳಿಗೆ ಆಗಮಿಸಿ ಶಂಕರಪಾಟೀಲ್ ಮುನೇನಕೊಪ್ಪ ಅವರು ಬಿಜೆಪಿ ಕಚೇರಿಗೆ ಆಗಮಿಸಿದ್ದರು. ಆದರೆ ಕಚೇರಿಗೆ ಆಗಮಿಸಿದ ಸಚಿವರನ್ನು ಜಿಲ್ಲಾದ್ಯಕ್ಷರಾದವರು ಸ್ವಾಗತಿಸುವದು ಸಂಪ್ರದಾಯ. ಬಿಜೆಪಿ ಕಚೇರಿಯಲ್ಲೂ ನೂತನ ಸಚಿವರಿಗೆ ನೂರಾರು ಜನರು ಗುಂಪು ಗುಂಪಾಗಿ ಆಗಮಿಸಿ ಸ್ವಾಗತ ಕೋರಿದರು. ಆದರೆ ನೂತನ ಸಚಿವರು ಬಿಜೆಪಿ ಕಚೇರಿಗೆ ಬಂದರೂ, ಕಚೇರಿಗೆ ಜಿಲ್ಲಾಧ್ಯಕ್ಷ ಬೆಲ್ಲದ ಸುಳಿಯಲಿಲ್ಲ.

ಹುಬ್ಬಳ್ಳಿ- ಧಾರವಾಡ ನಗರ ಬಿಜೆಪಿ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಮಾತ್ರ ನಾಪತ್ತೆಯಾಗಿದ್ದರು.ಮಂತ್ರಿಗಿರಿ ಕೈತಪ್ಪಿದ ಹಿನ್ನಲೆ ಕಚೇರಿಗೆ ಬರಲಿಲ್ವಾ ಅಥವಾ ಶೆಟ್ಟರ್ ಬೆಂಬಲಿಗ ಎನ್ನುವ ಕಾರಣಕ್ಕೆ ದೂರ ಉಳಿದಿದ್ದಾರೆ ಎಂಬ ಅನುಮಾನ‌ ಹುಟ್ಟಿಕೊಂಡಿದ್ದು

ಸಚಿವ ಸ್ಥಾನ ಸಿಗದಿದ್ದಕ್ಕೆ ಅರವಿಂದ ಬೆಲ್ಲದ್ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Edited By : Manjunath H D
Kshetra Samachara

Kshetra Samachara

07/08/2021 01:48 pm

Cinque Terre

38.23 K

Cinque Terre

9

ಸಂಬಂಧಿತ ಸುದ್ದಿ