ಧಾರವಾಡ: ನಾನು ಅದೇ ಖಾತೆ ಬೇಕು ಇದೇ ಖಾತೆ ಬೇಕು ಎಂದು ಬೇಡಿಕೆ ಇಟ್ಟಿಲ್ಲ. ಇಲ್ಲಿ ಪ್ರಮುಖವಾಗಿ ಖಾತೆ ಮುಖ್ಯವಲ್ಲ. ಅದರಿಂದ ಜನರಿಗೆ ಏನೇನು ಅನುಕೂಲ ಮಾಡಿಕೊಡಬಹುದು ಎಂಬುದು ಮುಖ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಈಗ ಸಿಕ್ಕಂತ ಖಾತೆ ಬದಲಾವಣೆ ಆದರೂ ಆಗಬಹುದು ಎಂದು ಕೈಮಗ್ಗ, ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಸಚಿವರಾದ ಬಳಿಕ ಧಾರವಾಡಕ್ಕೆ ಮೊದಲ ಬಾರಿಗೆ ಆಗಮಿಸಿದ ಮುನೇನಕೊಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಖಾತೆ ಹಂಚಿಕೆಯಾಗಿದೆ ಎಂದು ತಿಳಿದುಕೊಂಡಿದ್ದೇನೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇನ್ನಷ್ಟೆ ತಿಳಿದುಕೊಳ್ಳಬೇಕಿದೆ. ಸಿಕ್ಕ ಖಾತೆ ದೊಡ್ಡದೋ ಸಣ್ಣದೋ ಗೊತ್ತಿಲ್ಲ. ಸಿಕ್ಕ ಅವಕಾಶದಲ್ಲೇ ಅದರಿಂದ ಜನರಿಗೆ ಒಳ್ಳೆಯದನ್ನು ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೆಲಸಗಳನ್ನು ಮಾಡಬೇಕಾಗಿದೆ ಎಂದರು.
ನಾನು ಮಂತ್ರಿ ಸ್ಥಾನವನ್ನೂ ಬಯಸಿರಲಿಲ್ಲ. ಮಂತ್ರಿ ಸ್ಥಾನ ಸಿಕ್ಕಿದೆ. ಖಾತೆಗೂ ನಾನು ಬೇಡಿಕೆ ಇಟ್ಟಿಲ್ಲ. ಧಾರವಾಡ ಜಿಲ್ಲೆಯ ಜನರ ಸಹಕಾರದಿಂದ ಸಚಿವನಾಗಿದ್ದು, ಸಿಕ್ಕ ಅವಕಾಶದಲ್ಲಿ ಕೆಲಸ ಮಾಡಿ ತೋರಿಸಬೇಕಾಗಿದೆ ಎಂದರು.
Kshetra Samachara
07/08/2021 01:25 pm