ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಧಾರವಾಡ ಬಂದ್ ಇಲ್ಲ

ಧಾರವಾಡ: ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಸಿಗದೇ ಇದ್ದಿದ್ದರಿಂದ ಕಿಡಿಗೇಡಿಗಳು ನಾಳೆ ಧಾರವಾಡ ಬಂದ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಹರಿಬಿಟ್ಟಿದ್ದರು.

ಈ ಫೋಟೋ ನೋಡಿದ ಅನೇಕರು ನಾಳೆ ಧಾರವಾಡ ಬಂದ್ ಆಗುತ್ತದೆ ಎಂದುಕೊಂಡಿದ್ದರು. ಆದರೆ, ನಾಳೆ ಯಾವುದೇ ಕಾರಣಕ್ಕೂ ಧಾರವಾಡ ಬಂದ್ ಆಗುವುದಿಲ್ಲ. ಯಾರೂ ಕೂಡ ಆ ರೀತಿಯ ಬಂದ್ ಮಾಡಬಾರದು. ನಮ್ಮ ನಾಯಕರಾದ ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ ಹಾಗೂ ಯಡಿಯೂರಪ್ಪನವರ ವಿರುದ್ಧ ಯಾರೂ ಅಸಂಬದ್ಧವಾಗಿ ಹೇಳಿಕೆ ನೀಡಬಾರದು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಬಂದ್ ಮಾಡುವುದು ಹಾಗೂ ನಾಯಕರ ವಿರುದ್ಧ ಪ್ರತಿಭಟನೆ ಮಾಡುವುದನ್ನು ಮಾಡಬಾರದು ಎಂದು ಶಾಸಕ ಅರವಿಂದ ಬೆಲ್ಲದ ಅವರೇ ತಿಳಿಸಿದ್ದು, ನಾಳೆ ಬಂದ್ ಇರುವುದಿಲ್ಲ ಎಂದು ಬಿಜೆಪಿ ಧಾರವಾಡ ಮಾಧ್ಯಮ ವಕ್ತಾರ ದೇವರಾಜ ಶಹಾಪುರ ಸ್ಪಷ್ಟಪಡಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

05/08/2021 03:06 pm

Cinque Terre

25.56 K

Cinque Terre

22

ಸಂಬಂಧಿತ ಸುದ್ದಿ