ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕ ನವನಿರ್ಮಾಣ ಸೇನೆ ವತಿಯಿಂದ ಬೆಳೆ ವಿಮೆ ಬಿಡುಗಡೆ ಮನವಿ ಸಲ್ಲಿಕೆ

ಅಳ್ನಾವರ: ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಹಳ್ಳ,ಕೊಳ್ಳಗಳೆಲ್ಲವು ತುಂಬಿ ಹರಿದು ರೈತರ ಬೆಳೆಗಳು ಹಾನಿಯಾಗಿ ರೈತರು ತುಂಬಾ ಕಷ್ಟದಲ್ಲಿದ್ದು,ರೈತರಿಗೆ ಸರಕಾರ ಬೆಳೆ ಹಾನಿಯನ್ನ ಕೂಡಲೇ ಬಿಡುಗಡೆ ಮಾಡಬೇಕಾಗಿ ಕುರಿತು 'ನವ ನಿರ್ಮಾಣ ಸೇನೆ ಅಳ್ನಾವರ ಘಟಕ' ವು ತಹಶೀಲ್ದಾರ್ ರವರಿಗೆ ಇಂದು ಮನವಿಯನ್ನು ಸಲ್ಲಿಸಿತು.

ರೈತರ ಗೋಳು ನಮಗರಿವಾಗುತ್ತೆ.ನಾವು ರೈತರ ಪರವಾಗಿದ್ದೇವೆ,ಮೇಲಿನ ಅಧಿಕಾರಿಗಳಿಗೆ ತಿಳಿಸಿ ತಮ್ಮ ಅಹವಾಲಿಗೆ ಆದಷ್ಟು ಬೇಗನೆ ಸ್ಪಂದಿಸಲಾಗುವುದು ಎಂದು ತಹಶೀಲ್ದಾರ್ 'ಅಮರೇಶ ಪಮ್ಮಾರ' ಹೇಳಿದರು.

ರೈತ ಈ ದೇಶದ ಬೆನ್ನೆಲುಬು.ಈ ಅತಿವೃಷ್ಟಿಯಿಂದ ರೈತ ವರ್ಗ ಸಂಕಷ್ಟಕ್ಕೀಡಾಗಿದೆ.ರೈತರಿಗಾದ ಹಾನಿಯನ್ನ ಸರಕಾರ ಈ ಕೂಡಲೇ ಭರಿಸಬೇಕು.ರೈತ ಬಾಂಧವರನ್ನು ಈ ಸಂಕಷ್ಟ ದಿಂದ ಹೊರತರಬೇಕು.ಇಲ್ಲ ವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುವುದು ಎಂದು 'ಕರ್ನಾಟಕ ನವ ನಿರ್ಮಾಣ ಸೇನೆ' ತಾಲೂಕು ಅಧ್ಯಕ್ಷ 'ಹಸನಸಾಬ ನಂದಗಡ' ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.

ಗೋವಿಂದ ವಡ್ಡರ, ಸಂಜು,ಅಜಿತ,ಸುಲೆಮಾನ್ ಹಾಗೂ ಕ ನ ನಿ ಸೇನೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ವರದಿ:ಮಹಾಂತೇಶ ಪಠಾಣಿ

Edited By : Nirmala Aralikatti
Kshetra Samachara

Kshetra Samachara

03/08/2021 05:10 pm

Cinque Terre

9 K

Cinque Terre

0

ಸಂಬಂಧಿತ ಸುದ್ದಿ