ಧಾರವಾಡ: ಸಿಎಂ ಸ್ಥಾನ ಕೈತಪ್ಪಿದ್ದರೂ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರಿಗೆ ಇಂದು 52 ನೇ ವರ್ಷದ ಬರ್ತ್‌ಡೇ ಸಂಭ್ರಮ.
ಬೆಲ್ಲದ ಅವರು ಕ್ಷೇತ್ರದಲ್ಲಿ ಇರದೇ ಇದ್ದರೂ ಅವರ ಬೆಂಬಲಿಗರು ಧಾರವಾಡದಲ್ಲಿ ಬೆಲ್ಲದ ಅವರ ಬರ್ತ್‌ಡೇ ಮಾಡುತ್ತಿದ್ದಾರೆ.
ಹೌದು! ಆರಾಧನಾ ಕಮಿಟಿ ಸದಸ್ಯ ಶಂಕರ ಕೊಟ್ರಿ ಹಾಗೂ ಅವರ ಗೆಳೆಯರು ಧಾರವಾಡದ ಕೆಲಗೇರಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ಬೆಲ್ಲದ ಅವರ ಹೆಸರಿನ ಮೇಲೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರ ಬರ್ತ್‌ಡೇ ಸಂಭ್ರಮಾಚರಣೆ ಮಾಡಿದ್ದಾರೆ.
ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸುತ್ತಿರುವ ಮಧ್ಯೆಯೇ ಬೆಲ್ಲದ ಅವರ ಬರ್ತ್‌ಡೇ ದಿನ ಬಂದಿದ್ದು, ಅವರ ಬೆಂಬಲಿಗರು ಬರ್ತ್‌ಡೇ ಸಂಭ್ರಮಾಚರಣೆ ಮಾಡುವ ಮೂಲಕ ಬೆಲ್ಲದ ಅವರು ಸಚಿವರಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
Kshetra Samachara
03/08/2021 04:50 pm