ನವಲಗುಂದ : ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೆ ಸೇರಿದ ಬಿಟಿ ಹತ್ತಿ ಸಸಿಗಳ ಬೆಳೆಯನ್ನು ನಿನ್ನೆ ತಡ ರಾತ್ರಿ ದುಷ್ಕರ್ಮಿಗಳು ಕಿತ್ತು ಕ್ರೌರ್ಯ ಮೆರೆದ ಘಟನೆ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಬಳಿಯ ಹತ್ತಿ ಹೊಲದಲ್ಲಿ ನಡೆದಿದೆ.
ಹೌದು ಬೆಳವಟಗಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭು ಗೌಡ ಪಾಟೀಲ ಎಂಬುವವರಿಗೆ ಸೇರಿದ ಜಮೀನು ಇದಾಗಿದ್ದು, ಸುಮಾರು ಮೂರು ಎಕರೆಯಲ್ಲಿ ಬೆಳೆದ ಬಿಟಿ ಹತ್ತಿ ಬೆಳೆಯನ್ನು ಕಿತ್ತು ಹಾಕಲಾಗಿದೆ. ಇದರಿಂದ ಕಂಗಲಾದ ರೈತ ಈ ರೀತಿ ವಿಕೃತಿ ಮೆರೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಪರಿಹಾರ ನೀಡಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡರು.
Kshetra Samachara
29/07/2021 05:09 pm