ಧಾರವಾಡ : ಅಡುಗೆ ಅನಿಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರಾದ ಗೌರಮ್ಮ ಬಲೋಗಿ (ನಾಡಗೌಡ್ರ ) ರವರ ನೇತೃತ್ವದಲ್ಲಿ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಕೋವಿಡ್ ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳುವುದರ ಮುಂಚೆ ದರ ಏರಿಕೆ ಮಧ್ಯಯೇ ಗಾಯದ ಮೇಲೆ ಬರೆ ಎಂಬಂತೆ ಅಡುಗೆ ಅನಿಲ ದರವು ಹೆಚ್ಚಳವಾಗಿದ್ದು, ದಿನದಿಂದ ದಿನಕ್ಕೆ ಸಿಲಿಂಡರ್ ದರವನ್ನು ಏರಿಸಿ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೇಂದ್ರ ಸರಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕಿದರು,ಸಿಲಿಂಡರ್ ಗೆ ಪೂಜೆ ಮಾಡಿ, ಒಲೆ ಹಚ್ಚಿ, ಚುರುಮುರಿ - ಚಾ ಮಾಡಿ,ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬಸವರಾಜ್ ಜಾಧವ, ಆನಂದ ಸಿಂಗ್ನಾಥ್, ಜಮೀರ್ ಅಹಮ್ಮದ್ ಬಲಬಟ್ಟೆ, ವಸಂತ್ ಅರ್ಕಾಚಾರಿ, ದೀಪಕ್ ಪಾಟೀಲ್, ಕುಸುಮ ಜೈನ, ರತ್ನ ಜೈನ, ಸುಮಿತ್ರಾ ಜೈನ, ವಿಜಯಲಕ್ಷ್ಮಿ, ಹಲವಾರು ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.
Kshetra Samachara
01/03/2021 08:26 pm