ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶಾಲಾ ಮಕ್ಕಳಿಗೆ ಸಿರಿಧಾನ್ಯ ಆಹಾರ ನೀಡ್ತಾರಂತೆ

ಧಾರವಾಡ: ಶಾಲಾ ಮಕ್ಕಳಿಗೆ ಪೂರೈಕೆಯಾಗುತ್ತಿರುವ ಬಿಸಿಯೂಟದಲ್ಲಿ ಕೊಂಚ ಬದಲಾವಣೆ ಮಾಡಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ವಾರದಲ್ಲಿ ಒಂದು ದಿನ ಸಿರಿಧಾನ್ಯಗಳ ಆಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಧಾರವಾಡದಲ್ಲಿ ನಿನ್ನೆ ನಡೆದ ಸಿರಿಧಾನ್ಯ ಬೆಳೆಗಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿರಿಧಾನ್ಯಗಳು ಮಕ್ಕಳ ಆರೋಗ್ಯಕ್ಕೆ ಪೂರಕವಾಗಿರಲಿವೆ. ವಾರದಲ್ಲಿ ಒಂದು ದಿನ ಮಕ್ಕಳಿಗೆ ಸಿರಿಧಾನ್ಯಗಳ ಬಿಸಿಯೂಟ ನೀಡುವ ಮೂಲಕ ಅವುಗಳನ್ನು ಬೆಳೆಯುವ ರೈತರಿಗೆ ಬೇಡಿಕೆ ಬರುವಂತೆ ಮಾಡಲಾಗುವುದು. ಕೃಷಿ ವಿವಿ ವ್ಯಾಪ್ತಿಗೆ ಬರುವ ಎಲ್ಲ ಹಾಸ್ಟೆಲ್ ವಿದ್ಯಾರ್ಥಿಗಳಿಗೂ ಸಿರಿಧಾನ್ಯ ಆಹಾರ ನೀಡಲಾಗುವುದು. ಈ ಸಂಬಂಧ ಸಿಎಂಗೆ ಪ್ರಸ್ತಾವನೆ ಸಹ ಸಲ್ಲಿಸಲಿದ್ದೇವೆ. ಬರುವ ಬಜೆಟ್ ನಲ್ಲಿ ಕೂಡ ಇದನ್ನು ಗಮನಕ್ಕೆ ತರುತ್ತೇವೆ ಎಂದರು.

Edited By : Manjunath H D
Kshetra Samachara

Kshetra Samachara

28/02/2021 09:54 am

Cinque Terre

44.48 K

Cinque Terre

5

ಸಂಬಂಧಿತ ಸುದ್ದಿ