ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕೃಷಿ‌ ಮಾಡಲು ಹಗಲು ಹೊತ್ತು‌ ಮೂರು ಗಂಟೆ ಗುಣಮಟ್ಟದ ವಿದ್ಯುತ್ ಪೂರೈಸಿ:ಶಾಸಕ ಸಿ ಎಂ ನಿಂಬಣ್ಣವರ

ಕಲಘಟಗಿ: ತಾಲೂಕಿನಲ್ಲಿನ ರೈತರ ಕೃಷಿಗಾಗಿ ಹಗಲು ಹೊತ್ತು ಮೂರು ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಶಾಸಕ ಸಿ ಎಂ ನಿಂಬಣ್ಣವರ ಸೂಚಿಸಿದರು.

ಅವರು ಸ್ಥಳೀಯ ತಾ ಪಂ ಸಭಾ ಭವನದಲ್ಲಿ ಹೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ವಿದ್ಯುತ್ ಸಮಸ್ಯೆ ಕುರಿತು ಪರಿಹಾರ ಕಂಡುಕೊಳ್ಳಲು ಸೂಚಿಸಿ ಮಾತನಾಡಿ,ಟಿಸಿಗಳು ಸುಟ್ಟರೆ ಶೀಘ್ರ ಟಿಸಿ ಅಳ್ವಡಿಸುವಂತೆ ತಿಳಿಸಿದರು.ತಾಲೂಕಿನಲ್ಲಿ ಅನಧಿಕೃತ ಕೊಳವೆ ಬಾವಿಗಳ ಸಂಪರ್ಕ ಹೆಚ್ಚಾಗಿವೆ ಇದರಿಂದ ಟಿಸಿ ಸುಡುತ್ತಿವೆ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಿದರು.ಅಧಿಕೃತವಾಗಿ ಕೊಳವೆ ಬಾವಿ ಪರವಾನಿ ಪಡೆಯಲು ರೈತರಿಗೆ ಸೂಚಿಸಿ ಎಂದು ಶಾಸಕರು ತಿಳಿಸಿದರು.

ತಾ ಪಂ ಅಧ್ಯಕ್ಷೆ ಸುನೀತಾ ಮ್ಯಾಗೀನಮನಿ,ಸ್ಥಾಯಿ ಸಮಿತಿ ಅಧ್ಯಕ್ಷ ಈರಯ್ಯ ಸಿದ್ಧಾಪೂರಮಠ,ಉಪಾಧ್ಯಕ್ಷ ಚಂದ್ರಗೌಡ ಪಾಟೀಲ,ಶಾಸಕರ ಆಪ್ತ ಸಹಾಯಕ ಮಾರುತಿ ಹಂಚಿನಮನಿ,ತಾ ಪಂ ಇಒ ಎಂ ಎಸ್ ಮೇಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

26/02/2021 07:44 pm

Cinque Terre

21.59 K

Cinque Terre

0

ಸಂಬಂಧಿತ ಸುದ್ದಿ