ಧಾರವಾಡ: ಪಂಚಮಸಾಲಿ ಸಮುದಾಯದವರು ಮೀಸಲಾತಿಗೆ ಹೋರಾಟ ಮಾಡುವುದಕ್ಕೆ ನಮ್ಮದು ಯಾವುದೇ ವಿರೋಧವಿಲ್ಲ. ಆದರೆ, ಶಾಸಕ ಅರವಿಂದ ಬೆಲ್ಲದ ಅವರು ಅಲ್ಪಸಂಖ್ಯಾತರ ಶೇಕಡಾ 4 ರಷ್ಟು ಮೀಸಲಾತಿ ಕೇಳುವುದು ದುರ್ದೈವದ ಸಂಗತಿ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೂರೆ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೊಂದು ದಿನ ಮೀಸಲಾತಿಗಾಗಿ ಸವರ್ಣೀಯರಿಗೆ ನೀಡಿದ ಶೇಕಡಾ 10 ರಷ್ಟು ಮೀಸಲಾತಿಯನ್ನು ಶಾಸಕ ಅರವಿಂದ ಬೆಲ್ಲದ ಕೇಳಬಹುದು. ಇದರಿಂದ ನಾವು ಎಚ್ಚರಿಕೆಯಿಂದ ಇರಬೇಕು ಎಂದರು.
ಮುಸ್ಲಿಂರ ಮೀಸಲಾತಿ ತೆಗೆದು ನಮಗೆ ಕೊಡಿ ಅಂತಾರಲ್ಲಾ, ಇದಕ್ಕೆ ಹೋರಾಟ ಮಾಡುವ ಸ್ವಾಮೀಜಿಗಳು ಉತ್ತರಿಸಬೇಕು. ಲೂಸ್ ಟಾಕ್ ಮಾತನಾಡಿ ಹೋರಾಟದ ಮಹತ್ವ ಕಡಿಮೆ ಮಾಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ನವರು ಸರ್ವೇ ಜನಾ ಸುಖಿನೋಭವಂತು ಎಂದರೆ ಶಾಸಕ ಅರವಿಂದ ಬೆಲ್ಲದ ಅವರು ಅಹಂ ಸುಖಿನೋಭವಂತು, ಮುಸ್ಲಿಂ ದುಖಿನೋ ಭವಂತು ಎಂಬಂತೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
Kshetra Samachara
26/02/2021 03:33 pm