ಹುಬ್ಬಳ್ಳಿ : ಕೊನಗೂ ಹುಬ್ಬಳ್ಳಿ ಧಾರವಾಡ ಮಹಾನಗರದ ಪರಿಷ್ಕೃತ 82 ವಾರ್ಡುಗಳ ಪಟ್ಟಿ ಹೊರಬಿದ್ದಿದೆ. ಹಾಲಿ ಇದ್ದ 67 ವಾರ್ಡುಗಳನ್ನು 82 ಕ್ಕೆ ಹೆಚ್ಚಿಸಿ ರಾಜ್ಯ ಗೆಜೆಟ್ ದಲ್ಲಿ ಪ್ರಕಟಿಸಲಾಗಿದೆ.
ಈ ಮೊದಲಿದ್ದ 67 ವಾರ್ಡುಗಳನ್ನು 79 ಹಾಗೂ 82 ಕ್ಕೆ ಹೆಚ್ಚಿಸಿ ಪಾಲಿಕೆ ಆಯುಕ್ತರು ಎರಡು ಪಟ್ಟಿ ಸಲ್ಲಿಸಿದ್ದರು. ಸರಕಾರ ಕೊನೆಗೆ 82 ವಾರ್ಡುಗಳ ಪಟ್ಟಿಗೆ ಅನುಮೋದನೆ ನೀಡಿದೆ.
ವಾರ್ಡುಗಳ ಪುನರ್ ವಿಂಗಡನೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಒಂದು ವೇಳೆ ಆಕ್ಷೇಪಣೆಗಳು ಬಂದಲ್ಲಿ ಅವುಗಳನ್ನು ಪರಿಶೀಲಿಸಿ ಪಟ್ಟಿ ಅಂತಿಮಗೊಳಿಸಲಾಗುವುದೆಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಸಾರ್ವಜನಿಕರ ಅಕ್ಷೇಪಣೆಗಳಿಲ್ಲದಿದ್ದರೆ ಪಟ್ಟಿ ಅಂತಿಮಗೊಂಡು ಅನೇಕ ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿವೆ.
Kshetra Samachara
26/02/2021 11:51 am