ಕಲಘಟಗಿ:ತಾಲೂಕಿನ ಗಂಭ್ಯಾಪೂರ ಗ್ರಾಮದ ಬಸವೇಶ್ವರ ಅನುಭವ ಮಂಟಪದಲ್ಲಿ ಸಮಾಜ ಕಲ್ಯಾಣ ಇಲಾಖೆ,ಅಭಿರಕ್ಷಾ ಸಂಸ್ಥೆ ಮತ್ತು ಗ್ರಾಮ ಪಂಚಾಯತಿ ಆಶ್ರಯದಲ್ಲಿ ಅಸ್ಪೃಶ್ಯತಾ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ ಜೆ ಯೋಗಪ್ಪನವರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ,ಸಮಾಜ ಕಲ್ಯಾಣ ಇಲಾಖೆಯಲ್ಲಿನ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷೆ ಅನಸುಯ್ಯ ಕ್ಯಾರಣ್ಣವರ,ದಲಿತ ಮುಖಂಡ ಉಳವಪ್ಪ ಬಿದರಳ್ಳಿ,ಹನುಮಂತ ಕಾಳಿ,ಸೋಮಲಿಂಗ ಕಾಳಿ,ಡಿ ಎಸ್ ಎಸ್ ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಕಾದ್ರೊಳ್ಳಿ ಬಣ ಸಂಘಟನೆ ಯುವ ಘಟಕ ರಾಜ್ಯಾಧ್ಯಕ್ಷ ಮಂಜುನಾಥ ದೊಡಮನಿ,ಟಿ ಬಿ ಮಾದನಭಾವಿ ಹಾಗೂ ಗಂಭ್ಯಾಪೂರ ಗ್ರಾಮಸ್ಥರು,ಯುವಕರು ಉಪಸ್ಥಿತರಿದ್ದರು.
Kshetra Samachara
24/02/2021 06:35 pm