ಹುಬ್ಬಳ್ಳಿ: ಸಂಸದರಾದ ಪ್ರಲ್ಹಾದ ಜೋಶಿಯವರು ಕಾಂಗ್ರೆಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಟ್ಟು ಸಂಸದರಾಗಿ ಸಂಸದೀಯ ಭಾಷೆಯನ್ನು ಬಳಕೆ ಮಾಡಬೇಕು ವಿನಃ ಬೇಕಾಬಿಟ್ಟಿ ಮಾತನಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ ಹೇಳಿದರು.
ಕಾಂಗ್ರೆಸ್ ರಿಟೈರ್ಡಮೆಂಟ್ ತೆಗೆದುಕೊಳ್ಳಬೇಕು ಎಂಬುವಂತ ಪ್ರಲ್ಹಾದ ಜೋಶಿ ಹೇಳಿಕೆ ಕುರಿತು ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಸಂಸದರಾಗಿರುವ ಪ್ರಲ್ಹಾದ ಜೋಶಿಯವರಿಗೆ ಇಂತಹ ಮಾತುಗಳು ಶೋಭೆ ತರುವುದಿಲ್ಲ.ರಿಟೈರ್ಡಮೆಂಟ್ ತೆಗೆದುಕೊಳ್ಳುವುದು ನೌಕರಿ ಮಾಡುವವರಿಗೆ ಕಾಂಗ್ರೆಸ್ ಪಕ್ಷದ ರಿಟೈರ್ಡಮೆಂಟ್ ತೆಗೆದುಕೊಳ್ಳುವ ಪಕ್ಷವಲ್ಲ ಎಂದು ಜೋಶಿಯವರ ಹೇಳಿಕೆಗೆ ತಿರುಗೇಟು ನೀಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕಂಕಣಬದ್ಧರಾಗಿ ಹೋರಾಡಿದ ಪಕ್ಷ ನಮ್ಮದು ನಾವು ರಾಜೀನಾಮೆ ನೀಡಿ ಮನೆಗೆ ಹೋಗುವವರಲ್ಲ ಹೋರಾಟದ ಮೂಲಕ ಸಮಾಜ ಸೇವೆ ಮಾಡುವವರು ಎಂದು ಅವರು ಹೇಳಿದರು..
Kshetra Samachara
24/02/2021 03:33 pm