ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕ್ರೀಡಾ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ಬೆಲ್ಲದ

ಧಾರವಾಡ: ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಪಕ್ಕವೇ ಇರುವ ಸ್ಕೇಟಿಂಗ್ ಮೈದಾನದಲ್ಲಿ ಮಕ್ಕಳು ವ್ಯಾಯಾಮ ಮಾಡುವ ಸಲಕರಣೆಗಳನ್ನು ಫಿಕ್ಸ್ ಮಾಡಿದ್ದಕ್ಕೆ ಗರಂ ಆದ ಶಾಸಕ ಅರವಿಂದ ಬೆಲ್ಲದ, ಕ್ರೀಡಾ ಇಲಾಖೆ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಶಾಸಕ ಬೆಲ್ಲದ ಅವರು ಅನುದಾನ ಬಿಡುಗಡೆ ಮಾಡಿಸಿ, ಬೆಂಗಳೂರಿನಿಂದ ಉತ್ತಮ ದರ್ಜೆಯ ವ್ಯಾಯಾಮ ಮಾಡುವ ಸಲಕರಣೆಗಳನ್ನು ತರಿಸಿದ್ದರಂತೆ ಆದರೆ, ಕ್ರೀಡಾ ಇಲಾಖೆ ಅಧಿಕಾರಿಗಳು ಶಾಸಕರ ಗಮನಕ್ಕೂ ತರದೇ ಆ ಸಲಕರಣೆಗಳನ್ನು ಸ್ಕೇಟಿಂಗ್ ಮಾಡುವ ಮೈದಾನದಲ್ಲಿ ಅಳವಡಿಸಿದ್ದಾರೆ. ಇದರಿಂದ ಗರಂ ಆದ ಶಾಸಕ ಬೆಲ್ಲದ, ಈ ಸಲಕರಣೆಗಳನ್ನು ಇಲ್ಲಿ ಹಾಕಿ ಎಂದು ನಿಮಗೆ ಹೇಳಿದವರು ಯಾರು? ನೀವು ಕ್ರೀಡಾ ಇಲಾಖೆ ಅಧಿಕಾರಿಯೇ? ನಿಮ್ಮನ್ನು ಇದೇ ಮೊದಲ ಬಾರಿ ನಾನು ನಿಮ್ಮನ್ನು ನೋಡುತ್ತಿದ್ದೇನೆ. ಹೇಳದೇ ಕೇಳದೇ ಇಂತಹ ಕೆಲಸ ಮಾಡಿದರೆ ಹೇಗೆ? ಆ ಸ್ಕೇಟಿಂಗ್ ಮೈದಾನವನ್ನು ವಿಸ್ತರಣೆ ಮಾಡಬೇಕಾಗಿದೆ. ಅಂತಹ ಜಾಗದಲ್ಲಿ ಈ ಸಲಕರಣೆಗಳನ್ನು ತಂದು ಹಾಕಿದರೆ ಕಾಮಗಾರಿಗೆ ಅಡ್ಡಿಯಾಗುವುದಿಲ್ಲವೇ? ಕೂಡಲೇ ಒಳ್ಳೆಯ ಜಾಗ ಹುಡುಕಿ ಮಕ್ಕಳಿಗೆ ಅನುಕೂಲ ಆಗುವಂತೆ ಆ ವ್ಯಾಯಾಮ ಮಾಡುವ ಸಲಕರಣೆಗಳನ್ನು ಅಲ್ಲಿಗೆ ಶಿಫ್ಟ್ ಮಾಡಿ ಎಂದು ಸೂಚನೆ ನೀಡಿದರು.

Edited By : Manjunath H D
Kshetra Samachara

Kshetra Samachara

22/02/2021 02:08 pm

Cinque Terre

33.78 K

Cinque Terre

4

ಸಂಬಂಧಿತ ಸುದ್ದಿ