ಕುಂದಗೋಳ : ಲಿಂಗಾಯತ ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರ್ಪಡೆ ಮಾಡುವಂತೆ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ಹರಿಹರದ ವಚನಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಕೈಗೊಂಡ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಕುಂದಗೋಳ ತಾಲೂಕಿನ ಹಳ್ಳಿಗಳಿಂದ ವ್ಯಾಪಾರ ಬೆಂಬಲ ವ್ಯಕ್ತವಾಗಿದೆ.
ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಪಂಚಮಸಾಲಿ ಮುಖಂಡರ ನೇತೃತ್ವದಲ್ಲಿ ಪಂಚಮಸಾಲಿ ಸಮಾಜದವರು ಸಾರಿಗೆ ಬಸ್ ಏರಿ ಬೆಂಗಳೂರು ಚಲೋ ಕಾರ್ಯಕ್ರಮ ಹೊರಟು ಸಜ್ಜಾಗಿದ್ದಾರೆ.
ಕಾರ್ಯಕ್ರಮಕ್ಕೆ ಹೊರಡುವ ಮುನ್ನ ಹಿರೇಹರಕುಣಿ ಗ್ರಾಮದ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಮುಂದೆ ನಿಂತ ಸಮಾಜದವರು ಪಂಚಮಸಾಲಿ 2ಎ ಮೀಸಲಾತಿ ಆಗ್ರಹಿಸಿ ಘೋಷಣೆ ಕೂಗಿ ಸ್ವಾಮಿಜಿಗಳಿಗೆ ಜೈಕಾರ ಹಾಕಿದರು.
Kshetra Samachara
20/02/2021 11:08 pm