ಹುಬ್ಬಳ್ಳಿ: ಅದು ಉತ್ತರ ಕರ್ನಾಟಕಕ್ಕೆ ಮಾತ್ರವಲ್ಲದೆ ರಾಜ್ಯಕ್ಕೆ ಪ್ರತಿಷ್ಟೆಯ ಯೋಜನೆ.ಈ ಯೋಜನೆಗೆ ಸುಮಾರು ವರ್ಷಗಳಿಂದ ಹೋರಾಟಗಳು ನಡೆಯುತ್ತಲೇ ಇದೆ.ಆದರೆ ಆ ಯೋಜನೆಯಿಂದ ಮಾತ್ರ ಹೋರಾಟಕ್ಕೆ ಫುಲ್ ಸ್ಟಾಪ್ ಸಿಗುವಂತೆ ಕಾಣುತ್ತಿಲ್ಲ.ಈಗ ಈ ಹೋರಾಟದ ಜೊತೆಗೆ ಮತ್ತೊಂದು ಕೂಗು ಕೇಳಿ ಬರುತ್ತಿದೆ.ಅಷ್ಟಕ್ಕೂ ಯಾವುದು ಆ ಯೋಜನೆ...? ಮತ್ತೇ ಕೇಳಿ ಬರುತ್ತಿರುವ ಕೂಗು ಯಾವುದು ಅಂತೀರಾ ಈ ಸ್ಟೋರಿ ನೋಡಿ..
ಸುಮಾರು ನಾಲ್ಕು ದಶಕಗಳಿಂದ ಕಳಸಾ ಬಂಡೂರಿ ಹೋರಾಟ ನಡೆಯುತ್ತಲೇ ಇದೆ. ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ವರ್ಷ ಕಳೆದರೂ ಕೂಡ ಕಾಮಗಾರಿ ಕುರಿತು ಕಿಂಚಿತ್ತೂ ಕಾಳಜಿ ಕೂಡ ರಾಜ್ಯ ಸರ್ಕಾರವಾಗಲಿ,ಇಲ್ಲಿನ ಜನಪ್ರತಿನಿಧಿಗಳಾಗಳಿ ತೋರುತ್ತಿಲ್ಲ.ಉತ್ತರ ಕರ್ನಾಟಕ ಭಾಗದ ಕೃಷ್ಣಾ ಮೇಲ್ದಂಡೆ, ನಾರಾಯಣಪುರ ಜಲಾಶಯ ಮೇಲ್ದಂಡೆ ಯೋಜನೆ ಹೀಗೆ ಹಲವಾರು ನೀರಾವರಿ ಯೋಜನೆ ಹೋರಾಟದ ಫಲವಾಗಿ ಪ್ರಾರಂಭವಾಗಿ ಅರ್ಧದಷ್ಟು ಕಾಮಗಾರಿ ಅನುದಾನ ಕೊರತೆಯಿಂದ ಅಪೂರ್ಣಗೊಂಡಿದ್ದು,ಉತ್ತರ ಕರ್ನಾಟಕ ಭಾಗದಲ್ಲಿ ಪದೇ ಪದೇ ಇಂತಹ ಮಲತಾಯಿ ಧೋರಣೆ ಆಗುತ್ತಿದೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೇ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂಬುವಂತ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ.ಇಷ್ಟುದಿನ ಕಳಸಾ ಬಂಡೂರಿ ಜಾರಿಗೆ ಹೋರಾಟ ನಡೆಸುತ್ತಿದ್ದ ಹೋರಾಟಗಾರರು ಈಗ ಮತ್ತೇ ಪ್ರತ್ಯೇಕ ರಾಜ್ಯ ಹೋರಾಟವನ್ನು ಮುನ್ನೇಲೆಗೆ ತಂದಿದ್ದಾರೆ.
ರಾಜ್ಯದಲ್ಲಿ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಆಗುತ್ತಿದ್ದು,ನಮ್ಮ ಬೇಡಿಕೆ ಈಡೇರದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟ ಅನಿವಾರ್ಯವಾಗಿದೆ ಎಂಬುವಂತ ಎಚ್ಚರಿಕೆಯನ್ನು ಕಳಸಾ ಬಂಡೂರಿ ರೈತ ಹೋರಾಟಗಾರರು ನೀಡಿದ್ದಾರೆ.
ಗೆಜೆಟ್ ನೋಟಿಪೀಕೇಶನ ಹೊರಡಿಸಿ ಒಂದು ವರ್ಷ ಕಳೆದಿದೆ. ಮಹದಾಯಿ ಕಳಸಾ ಬಂಡೂರಿ ಕಾಮಗಾರಿಯನ್ನು ಸರಕಾರ ಪ್ರಾರಂಭಿಸಿಲ್ಲ.ಈ ತಿಂಗಳಾಂತ್ಯದಲ್ಲಿ ಮಹದಾಯಿ ಕಾಮಗಾರಿ ಆರಂಭಿಸಬೇಕು.ಕಾಮಗಾರಿ ಪ್ರಾರಂಭವಾಗದಿದ್ದರೆ ಮಾರ್ಚ್ ಮೊದಲ ವಾರದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಉಗ್ರ ಹೋರಾಟ ಮಾಡಲಾಗುತ್ತದೆ.ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇಕು.ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನ ಪೂರ್ಣಗೊಳಿಸಬೇಕು. ಸಚಿವ ಉಮೇಶ ಕತ್ತಿ, ಶ್ರೀರಾಮುಲು, ನಡಹಳ್ಳಿಯವರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದರು. ತಮ್ಮ ರಾಜಕೀಯ ಲಾಭಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಿದರು.ಅಲ್ಲದೇ ಬಾಗಲಕೋಟೆಯಲ್ಲಿ ಕಚೇರಿ ತೆರೆದು ಸಭೆ ಮಾಡಿದ್ದರು ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.
ನಾಲ್ಕು ದಶಕದ ಹೋರಾಟದ ಕಾಮಗಾರಿಗೆ ಮಾತ್ರ ರಾಜ್ಯ ಸರ್ಕಾರ ಯಾವುದೇ ಗ್ರೀನ್ ಸಿಗ್ನಲ್ ಸಿಗದಿರುವುದು ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಮುನ್ನುಡಿಯಾಗಿದೆ.ಸರ್ಕಾರದ ಮೀನಾಮೇಷದಿಂದ ಈಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದ್ದು,ಮುಂಬರುವ ದಿನಗಳಲ್ಲಿ ಹೋರಾಟ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುವುದನ್ನು ಕಾದುನೋಡಬೇಕಿದೆ.
Kshetra Samachara
20/02/2021 05:06 pm