ಧಾರವಾಡ: ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಣ ಕೊಡಬೇಡಿ ಎಂದು ಪಿಎಫ್ಐ ಸಂಘಟನೆ ನೀಡಿರುವ ಹೇಳಿಕೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಕಿಡಿ ಕಾರಿದ್ದಾರೆ.
ಪಿಎಫ್ಐ ಒಂದು ರಾಕ್ಷಸ ಸಂಘಟನೆ. ಅವರಿಗೆ ರಾಮ ಮಂದಿರ ನಿರ್ಮಾಣದ ಬಗ್ಗೆ ಮಾತನಾಡುವ ಅಧಿಕಾರ ಇಲ್ಲ. ಆರ್ ಎಸ್ ಎಸ್ ಸಮಾಜದಲ್ಲಿ ಅಶಾಂತಿ ಕದಡುತ್ತಿದೆ ಎಂದು ಪಿಎಫ್ಐ ಹೇಳಿಕೆ ಕೊಟ್ಟಿದೆ. ಇದು ರಾಕ್ಷಸನ ಬಾಯಲ್ಲಿ ಭಗವದ್ಗೀತೆ ಬಂದಂತಾಗಿದೆ ಎಂದು ಮುತಾಲಿಕ ಹೇಳಿದ್ದಾರೆ.
ಪಿಎಫ್ಐ ನವರು ಬಾಬರನ ಪರವಾಗಿದ್ದಾರೆ. ನಿಮಗೆ ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಸರ್ಕಾರವೇ ರಾಮ ಮಂದಿರ ನಿರ್ಮಾಣ ಸಂಬಂಧ ಟ್ರಸ್ಟ್ ಮಾಡಿದೆ. ಅದರ ನಿಯಮಾವಳಿ ಪ್ರಕಾರವೇ ಮಂದಿರ ನಿರ್ಮಾಣ ಆಗುತ್ತಿದೆ. ಇದರ ಬಗ್ಗೆ ಪಿಎಫ್ಐ ಮತ್ತೊಮ್ಮೆ ಮಾತೆತ್ತಬಾರದು ಎಂದಿದ್ದಾರೆ.
Kshetra Samachara
20/02/2021 12:46 pm