ಅಣ್ಣಿಗೇರಿ : ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಂಬಿಗೇರಿ ಕುಡಿಯುವ ನೀರಿನ ಕೆರೆಯ ಕಂಪೌಂಡ ಕಾಮಗಾರಿ ಹಾಗೂ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಸ್ಥಳವನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಗುರುವಾರ ಪರಿಶೀಲಿಸಿದರು.
ನಗರದ ಬಾಪೂಜಿ ಶಾಲೆ ಹತ್ತಿರವಿರುವ ಬಿಸ್ಮಿಲ್ಲಾ ಆಗ್ರೋ ಇಂಪ್ಲಿಮೆಂಟ ಫ್ಯಾಕ್ಟರಿಗೂ ಸಹ ಬೇಟಿ ನೀಡಿ ನೂತನ ಕೃಷಿ ಚಟುವಟಿಕೆಗಳನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ. ಆಶ್ರಯ ಸಮಿತಿ ಸದಸ್ಯ ಶಿವಯೋಗಿ ಸುರಕೋಡ. ರಾಘವೇಂದ್ರ ರಾಮಗಿರಿ. ರಿಷಿಕುಮಾರ ಸಾರಂಗಿ.ಮುಖ್ಯಾಧಿಕಾರಿ ಕೆ.ಎಫ್.ಕಟಗಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
18/02/2021 09:47 pm