ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಜನೆಗಳ ಕನಸುಗಾರ...ಅಭಿವೃದ್ಧಿ ನನಸುಗಾರ ಸಚಿವ ಜಗದೀಶ್ ಶೆಟ್ಟರ್...!

ಹುಬ್ಬಳ್ಳಿ: ಅಜಾತ ಶತ್ರು, ಬಿಜೆಪಿ ಕಟ್ಟಾಳು,ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯ ರಾಜಕಾರಣದ ಜೊತೆಗೆ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಕಾಯಕಯೋಗಿ.

ಏನು ಮಾಡಿದ್ದಾರೆ ಎಂಬುವವರ ಮಾತಿಗೆ ಕೃತಿಯ ಮೂಲಕ ಉತ್ತರ ನೀಡುವ ಹಲವಾರು ಯೋಜನೆಗಳ ಹರಿಕಾರ ಎಂದು ಗುರುತಿಸಿಕೊಂಡಿದ್ದಾರೆ.ಅಷ್ಟಕ್ಕೂ ಆ ವ್ಯಕ್ತಿ ಯಾರು ಅವರು ಮಾಡಿದ್ದಾದರೂ ಏನು ಅಂತೀರಾ?

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಂದ್ರೆ ಹು-ಧಾ ಮಹಾನಗರದ ಜನತೆ ಮಾತ್ರವಲ್ಲದೆ ರಾಜ್ಯದ ಸಣ್ಣ ಮಕ್ಕಳಿಗೂ ಕೂಡ ಪರಿಚಯ ಇರುವ ವ್ಯಕ್ತಿತ್ವ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರದು. ಹೌದು..ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಅನುಭವ ಪಡೆದ ರಾಜಕಾರಣಿ ಜಗದೀಶ್ ಶೆಟ್ಟರ್ ಹು-ಧಾ ಮಹಾನಗರ ಅಭಿವೃದ್ಧಿಗೆ ಹಾಗೂ ಧಾರವಾಡ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿದ್ದಾರೆ.

ನಾವೆಲ್ಲ ಕೇವಲ ಮೆಟ್ರೊಪಾಲಿಟನ್ ಸಿಟಿಯಲ್ಲಿ ಉತ್ತಮವಾದ ರಸ್ತೆಗಳನ್ನು ನೋಡುತ್ತಿದ್ದೆವು ಆದ್ರೇ ಜಗದೀಶ್ ಶೆಟ್ಟರ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ವಿದ್ಯಾನಗರದ ಶಿರೂರ ಪಾರ್ಕಿನಲ್ಲಿ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣದ ಮೂಲಕ ಸಾರ್ವಜನಿಕರಿಗೆ ಉತ್ತಮ ಸೌಕರ್ಯ ಕಲ್ಪಿಸಿದ್ದಾರೆ. ಮಾತನಾಡಿದರೇ ಕೆಲಸ ಮಾಡಿದಂತಾಗುವುದಿಲ್ಲ. ಕೆಲಸಗಳೇ ಮಾತನಾಡಬೇಕು ಎಂಬುವಂತೇ ಉತ್ಕೃಷ್ಟ ಮಟ್ಟದ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ ಮಾಡಿದ್ದು,ಜಗದೀಶ್ ಶೆಟ್ಟರ್ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಹಾಗಿದ್ದರೇ ನೀವೆ ನೋಡಿ ಟೆಂಡರ್ ಶ್ಯೂರ್ ರಸ್ತೆ ವೈಭವವನ್ನು..

ಶಿರೂರ ಪಾರ್ಕಿನಲ್ಲಿ ನಿರ್ಮಾಣಗೊಂಡಿರುವ ಟೆಂಡರ್ ಶ್ಯೂರ್ ರಸ್ತೆಯು ಅತ್ಯುತ್ತಮ ಗುಣಮಟ್ಟದ ರಸ್ತೆಯಾಗಿದ್ದು,ಅಧುನಿಕ ತಂತ್ರಜ್ಞಾನದ ದೃಷ್ಟಿಕೋನದಿಂದ ನಿರ್ಮಾಣ ಮಾಡಲಾಗಿದೆ‌. ವಿದ್ಯಾನಗರದ ಶಿರೂರ್ ಪಾರ್ಕಿನಿಂದ ತೋಳನಕೆರೆಯ ವರೆಗೂ ಗುಣಮಟ್ಟದ ರಸ್ತೆಯನ್ನು ಮಾಡಿಸಿದ್ದು,ಈ ರಸ್ತೆಯಲ್ಲಿ ಒಮ್ಮೆ ಸಂಚರಿಸಿದರೇ ನಿಜಕ್ಕೂ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಓಡಾಡಿದಂತಾಗುತ್ತದೆ.ಇಂತಹ ಮಹತ್ವದ ಯೋಜನೆಯ ಕುರಿತು ಸಾರ್ವಜನಿಕರು ಏನು ಹೇಳಿದ್ದಾರೆ ನೀವೆ ನೋಡಿ..

ಈ ಹಿಂದೇ ಸಾರ್ವಜನಿಕರ ಕಲ್ಪನೆಯಲ್ಲಿಯೂ ಇರದಂತಹ ರಸ್ತೆಯನ್ನು ಮಾಡಿರುವುದು ಜಗದೀಶ್ ಶೆಟ್ಟರ್ ಅವರ ಕಾರ್ಯ.ವಿಸ್ತಾರವಾದ ಹಾಗೂ ವಿಶಾಲವಾದ ರಸ್ತೆ,ಪಾದಚಾರಿಗಳಿಗೆ ಫುಟ್ ಪಾಥ್,ಸೈಕ್ಲಿಂಗ್ ಪಾಥ್ ವಿಶ್ರಾಂತಿ ಪಡೆದುಕೊಳ್ಳಲು ತಂಗುದಾಣ. ಇದು ವಾಯುವಿಹಾರಿಗಳಿಗೂ ಮುದ ನೀಡುತ್ತದೆ. ವಯೋವೃದ್ಧರು ತಮ್ಮ ಬಾಲ್ಯ ಸ್ನೇಹಿತರೊಂದಿಗೆ ಉಭಯ ಕುಷಲೋಪರಿ ನಡೆಸಲು ಹಾಗೂ ನಡೆದು ಬಂದ ದಾರಿಯನ್ನು ನೆನೆಪಿಸುವಂತೆ ಹುಬ್ಬಳ್ಳಿ ಶಿರೂರ ಪಾರ್ಕ್ ರಸ್ತೆ ನಿರ್ಮಾಣವಾಗಿದೆ.

ಕಣ್ಣಿಗೆ ತಂಪು ನೀಡುವ ಹಚ್ಚು ಹಸಿರಿನ ವಾತಾವರಣ, ವಾಯು ವಿಹಾರಕ್ಕೆ ಮಾತ್ರವಲ್ಲದೆ ಮಕ್ಕಳ ಮನರಂಜನೆ ಹಾಗೂ ಪಿಕ್ ನಿಕ್ ಸ್ಪಾಟ್ ಆಗಿದೆ ಎತ್ತಿರುವ ನೃಪತುಂಗ ಬೆಟ್ಟ. ನಿರ್ವಹನೆ ಕೊರತೆಯೋ, ಸಾರ್ವಜನಿಕರ ಬೇಜವಾಬ್ದಾರಿಯೋ ಹಲವು ಕಾರಣಗಳಿಂದ ಮೊದಲು ಅವ್ಯವಸ್ಥೆ ಆಗರವಾಗಿತ್ತು. ಆದರೆ ಜಗದೀಶ್ ಶೆಟ್ಟರ್ ಅವರ ಮುತವರ್ಜಿಯಿಂದ ನೃಪತುಂಗ ಬೆಟ್ಟ ಈಗ ಪ್ರತಿಷ್ಠಿತ ಪ್ರವಾಸಿ ತಾಣವಾಗಿದೆ. ನೃಪತುಂಗ ಬೆಟ್ಟವನ್ನು ಅಭಿವೃದ್ಧಿಗೊಳಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಜಗದೀಶ್ ಶೆಟ್ಟರ್ ಅವರ ಪಾತ್ರ ಪ್ರಮುಖವಾಗಿದೆ.ನೃಪತುಂಗ ಬೆಟ್ಟದ ಅವ್ಯವಸ್ಥೆಯಿಂದ ಬೇಸತ್ತ ಪ್ರವಾಸಿಗರಿಗೆ ಒಂದು ಪ್ರವಾಸಿ ತಾಣವನ್ನಾಗಿ‌ ಮಾಡಿದ ಗೌರವ ಜಗದೀಶ್ ಶೆಟ್ಟರ್ ಅವರಿಗೆ ಸಲ್ಲುತ್ತದೆ.ಇನ್ನೂ ಈ ಕುರಿತು ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ...

ಹಲವಾರು ಯೋಜನೆ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಸಚಿವ ಜಗದೀಶ್ ಶೆಟ್ಟರ್ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.ಇನ್ನೂ ಕನಕಪುರದ ಧ್ಯಾನ ಮಂದಿರದಿಂದ ಪ್ರೇರಿತರಾಗಿ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಜನರಿಗೆ ಏಕಾಗ್ರತೆ ಹಾಗೂ ಧ್ಯಾನಕ್ಕಾಗಿ ಹುಬ್ಬಳ್ಳಿಯ ವಿಶ್ವೇಶ್ವರಯ್ಯ ನಗರದಲ್ಲಿ ಧ್ಯಾನ ಮಂದಿರವನ್ನು ನಿರ್ಮಾಣ ಮಾಡಿದ್ದಾರೆ. ಭವ್ಯವಾದ ಗೋಪುರ, ನಿಶಬ್ಧತೆ, ಸುತ್ತಲೂ ವಾಕಿಂಗ್ ಪಾಥ್ ,ವಿಶ್ರಾಂತಿ ಗೃಹ ಹೀಗೆ‌ ನೋಡಿದಾಕ್ಷಣವೇ ಮನಸ್ಸಿಗೆ ಮುದ ನೀಡುವ ವಾತಾವರಣ ನಿರ್ಮಾಣಕ್ಕೆ ಸಾಕ್ಷಿಯಾಗಿದೆ ಜಗದೀಶ ಶೆಟ್ಟರ್ ಅವರ ಕಾರ್ಯ.ಇನ್ನೂ ಈ ಕಾರ್ಯದ ಕುರಿತು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಉತ್ತಮ ಕಾರ್ಯದ ಮೂಲಕ ಸಾರ್ವಜನಿಕರ ಮನಗೆದ್ದಿರುವ ಜಗದೀಶ್ ಶೆಟ್ಟರ್ ಇನ್ನೂ ಹಲವಾರು ಕನಸನ್ನು ಕಟ್ಟಿಕೊಂಡಿರುವ ಮುತ್ಸದ್ಧಿ ನಾಯಕ.ಇವರ ಜನಪರ ಕಾಳಜಿ ಹೀಗೆ ಮುಂದುವರೆಯಲಿ ಎಂಬುವುದು ಅವಳಿನಗರದ ಜನರ ಆಶಯ...!

ಪ್ರಾಯೋಜಿತ

Edited By : PublicNext Desk
Kshetra Samachara

Kshetra Samachara

17/02/2021 01:25 pm

Cinque Terre

92.2 K

Cinque Terre

50

ಸಂಬಂಧಿತ ಸುದ್ದಿ