ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಇಂಧನ ಬೆಲೆ ಏರಿಕೆ ಶಾಕ್, ಕಾಂಗ್ರೆಸ್'ನಿಂದ ಸತ್ಯಾಗ್ರಹ ಎಚ್ಚರಿಕೆ

ಕುಂದಗೋಳ : ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಾಗೂ ಎಲ್ಪಿಜಿ ಸಿಲಿಂಡರ್ ದರದ ಏರಿಕೆ ವಿರೋಧಿಸಿ ಕುಂದಗೋಳ ಪಟ್ಟಣದಲ್ಲಿ ಕಾಂಗ್ರೆ‌ಸ್ ಪಕ್ಷದ ವತಿಯಿಂದ ಶಾಸಕಿ ಕುಸುಮಾವತಿ ಶಿವಳ್ಳಿ ನೇತೃತ್ವದಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರ ಸಮ್ಮುಖದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಗಾಳಿ ಮರೇಮ್ಮದೇವಿ ದೇವಸ್ಥಾನದಿಂದ ಪ್ರತಿಭಟನೆ ಆರಂಭಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಿಲಿಂಡರ್ ಹಾಗೂ ಮೋಟಾರ್ ಸೈಕಲ್ ಗೆ ಹೂಮಾಲೆ ಹಾಕಿ ಶ್ರದ್ಧಾಂಜಲಿ ಸಲ್ಲಿಸಿ ಇಂಧನ ಹಾಗೂ ಎಲ್ಪಿಜಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ಹೊರಹಾಕಿದರು.

ತಹಶೀಲ್ದಾರ ಕಚೇರಿಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅರ್ಧ ಗಂಟೆ ಅಧಿಕ ಕಾಲ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಿಜೆಪಿ ಸರ್ಕಾರದ ಆಡಳಿತ ಧೋರಣೆ ಖಂಡಿಸಿ ಇದು ಶ್ರೀಮಂತರ ಸರ್ಕಾರ ಬಡವರಿಗಲ್ಲ ಎಂದು ಘೋಷಣೆ ಹಾಕಿದರು.

ಬಳಿಕ ತಹಶೀಲ್ದಾರ ಬಸವರಾಜ ಮೆಳವಂಕಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಇಂಧನ ಹಾಗೂ ಎಲ್ಪಿಜಿ ಸಿಲಿಂಡರ್ ಬೆಲೆ ಕಡಿಮೆ ಮಾಡದಿದ್ದರೆ ಕುಂದಗೋಳ ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಎಚ್ಚರಿಕೆಯನ್ನ ಸರ್ಕಾರಕ್ಕೆ ನೀಡಿದರು.

Edited By : Manjunath H D
Kshetra Samachara

Kshetra Samachara

16/02/2021 05:52 pm

Cinque Terre

18.91 K

Cinque Terre

1

ಸಂಬಂಧಿತ ಸುದ್ದಿ