ಧಾರವಾಡ: ದೆಹಲಿಯಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತ ರಿಂಕು ಶರ್ಮಾ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಶ್ರೀರಾಮ ಸೇನಾ ಹಿಂದೂಸ್ತಾನ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಿಂಕು ಶರ್ಮಾ ಎಂಬ ಯುವಕ ಶ್ರೀ ರಾಮ ಮಂದಿರಕ್ಕಾಗಿ ನಿಧಿ ಸಂಗ್ರಹ ಮಾಡುವಲ್ಲಿ ಮುಂಚೂಣಿಯಲ್ಲಿದ್ದ. ಆತ ಖುಷಿಯಿಂದ ನಿಧಿ ಸಂಗ್ರಹ ಮಾಡುತ್ತಿರುವುದನ್ನು ಕಂಡ ಜಿಹಾದಿಗಳಾದ ಜಾಹೀದ್ ಮತ್ತು ಅವರ ಸಂಗಡಿಗರು ಸರಿಯಾದ ಸಮಯಕ್ಕಾಗಿ ಕಾದು ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿ, ಹೊರಗಡೆ ತಂದು ರಿಂಕು ಶರ್ಮಾನನ್ನು ಕೊಲೆ ಮಾಡಿದ್ದಾರೆ.
ಅವನ ಸಾವು ನಮ್ಮ ಹಿಂದೂ ಸಮಾಜಕ್ಕೆ ತುಂಬಾ ದುಃಖ ತರಿಸಿದೆ. ಹಿಂದೂ ಕಾರ್ಯಕರ್ತರ ಮೇಲಾಗುತ್ತಿರುವ ಹಲ್ಲೆ, ಕೊಲೆಯನ್ನು ನಾವು ಖಂಡಿಸುತ್ತೇವೆ. ಕೂಡಲೇ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಕಳೆದ 5 ವರ್ಷಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಾಗಿರುವ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನೂ ಸಿಬಿಐಗೆ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
Kshetra Samachara
16/02/2021 04:26 pm