ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪಟ್ಟಣದಲ್ಲಿ ನಾನು ಸ್ವಚ್ಚತೆಯ ಸೂಪರಸ್ಟಾರ್ ಕಾರ್ಯಕ್ರಮ

ಕುಂದಗೋಳ : ಇಂದು ನಮ್ಮ ಕುಂದಗೋಳ ಪಟ್ಟಣದ ಜನರಿಗೆ ವಿಶೇಷ ದಿನ. ಕಾರಣ ಕಳೆದ ಬುಧವಾರ ನಾವು ನೀವು ಹೇಗೋ ಕಳೆದವು ಇಂದಿನಿಂದ ಪ್ರತಿ ಭಾನುವಾರವೂ ನಾವು ಸ್ವಚ್ಚತೆಯ ಸೂಪರ್ ಸ್ಟಾರ್ ಆಗಿ ಕಳೆಯೋಣ ಎಂದು ಕಲ್ಯಾಣಪುರ ಬಸವಣ್ಣನವರು ಹೇಳಿದರು.

ಅವರು ಪಟ್ಟಣ ಪಂಚಾಯಿತಿ ಕೈಗೊಳ್ಳಲಾದ ಪ್ರತಿ ಭಾನುವಾರ ವಿಶೇಷ ದೇಶದ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾನು ಸ್ವಚ್ಚತೆಯ ಸೂಪರ್ ಸ್ಟಾರ್ ಎಂಬ ಸದುದ್ದೇಶ ಮೂಲಕ ನಮ್ಮ ಗ್ರಾಮ ನಮ್ಮ ಪಟ್ಟಣದ ಸ್ವಚ್ಚತೆಗಾಗಿ ನಾವು ಸಾರ್ವಜನಿಕರೇ ಮುಂದಾಗಲು ಪ್ರೇರೇಪಿಸುವ ಈ ಕಾರ್ಯ ಉತ್ತಮವಾದದು ಎಂದರು.

ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಾಗೀಶ ಗಂಗಾಯಿ ಹಾಗೂ ಉಪಾಧ್ಯಕ್ಷೆ ಭುವನೇಶ್ವರಿ ಕವಲಗೇರಿ ಹಾಗೂ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್ ಗೋಂದಕರ್, ಆರೋಗ್ಯ ನಿರೀಕ್ಷಕಿ ಜಾನಕಿ ಬಳ್ಳಾರಿ, ಪೌಂಡೇಶನ್ ವಿದ್ಯಾರ್ಥಿಗಳು ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ ಜೊತೆ ಸೇರಿ ಕುಂದಗೋಳ ಪಟ್ಟಣದ ಕೆರೆಯಂಗಳ ಸ್ವಚ್ಚ ಗೊಳಿಸಿದರು.

ಸ್ವತಃ ಕಲ್ಯಾಣಪುರ ಬಸವಣ್ಣನವರು ಸಲಕೆ ಹಿಡಿದು ಸ್ವಚ್ಚತಾ ಕಾರ್ಯಕ್ಕೆ ಸಾಥ್ ನೀಡಿದರು.

Edited By : Manjunath H D
Kshetra Samachara

Kshetra Samachara

16/02/2021 02:01 pm

Cinque Terre

14.41 K

Cinque Terre

1

ಸಂಬಂಧಿತ ಸುದ್ದಿ