ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಬೈಪಾಸ್ ಅಗಲಿಕರಣ ಮಾಡೋಕೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಆದೇಶ ನೀಡಿದ್ದಾರೆ. ದ್ವಿಪಥ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ಪರಿವರ್ತನೆ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಹಾಗೂ ನೈಸ್ ಕಂಪನಿಯ ಖೇಣೆಯವರಿಗೆ ಹೇಳಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು..
ನಗರದಲ್ಲಿಂದು ಸರ್ಕ್ಯೂಟ್ ಹೌಸನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೋಶಿಯರ ನೇತೃತ್ವದಲ್ಲಿ ನಾವೆಲ್ಲ ದೆಹಲಿಗೆ ಹೋಗಿದ್ದೇವು.ಆದಷ್ಟು ಬೇಗ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಖೇಣಿಯವರಿಗೂ ಹೇಳಿದ್ದಾರೆ.ಭೂಸ್ವಾಧಿನ ಮಾಡಬೇಕು ಅಂದ ಸ್ವತಃ ಗಡ್ಕರಿಯರವರೆ ಡಿಸಿಗೆ ಹೇಳಿದ್ದಾರೆ.1200 ಕೋಟಿ ವೆಚ್ವದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು,ಒಟ್ಟು 30 ಕಿಲೊ ಮೀಟರ್ ರಸ್ತೆ ಅಗಲಿಕರಣ ಆಗುತ್ತದೆ. ಎರಡೂವರೆ ವರ್ಷದಲ್ಲಿ ರಸ್ತೆ ಕಾಮಗಾರಿ ಮುಗಿಯಬೇಕು ಎಂದರು.
ಜಗತ್ಪ್ರಸಿದ್ಧ ಟೆಸ್ಲಾ ಕಂಪನಿ ರಾಜ್ಯಕ್ಕೆ ಬರುತ್ತಿದೆ.ಅವರು ತಮ್ಮ ಕಮರ್ಷಿಯಲ್ ಚಟುವಟಿಗಾಗಿ ಬೆಂಗಳೂರು ನಗರ ಆಯ್ಕೆ ಮಾಡಿಕೊಂಡಿದ್ದಾರೆ.ಅವರಿಗೆ ಎಲ್ಲಾ ನೆರವು ನೀಡುತ್ತೆವೆ.ಅವರೆನಾದರೂ ಎಲೆಕ್ಟ್ರಿಕಲ್ ವಾಹನ ಉತ್ಪಾದನೆ ಮಾಡಿದರೇ ನಮ್ಮ ಸರ್ಕಾರ ಸಹಾಯ ಮಾಡುತ್ತೆ.ಕೊರೋನಾ ಪ್ರಮಾಣ ಕಡಿಮೆಯಾಗಿದ್ದು, ಎಲ್ಲಾ ಇಂಡಸ್ಟ್ರಿಯಲ್ ಸಧ್ಯ ಮತ್ತೆ ಉತ್ಪಾದನೆ ಶುರುಮಾಡಿವೆ.ಜಿಲ್ಲೆಗೂ ಏಕಸ್ ಸೇರಿದಂತೆ ಹಲವು ಕಂಪನಿಗಳು ಬರ್ತಿವೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಬಜೆಟ್ ಉತ್ತಮವಾದ ಬಜೆಟ್ ಆಗಿದ್ದು,ಈ ಬಾರಿ ಬಜೆಟ್ ನಿಂದ ಮೂಲಭೂತ ಸೌಕರ್ಯ,ಆರೋಗ್ಯ, ಶಿಕ್ಷಣ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಜನರು ಪಡೆದುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
Kshetra Samachara
13/02/2021 06:55 pm