ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಚುನಾವಣೆ ಮುನ್ನವೇ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಹತ್ತು ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಣೆ ಮಾಡುವ ಪೂರ್ವದಲ್ಲಿಯೇ‌ ಪಾಲಿಕೆಯ ಮೇಯರ್ ಹಾಗೂ ಉಪಮೇಯರ ಮೀಸಲಾತಿ ಪಟ್ಟಿಯನ್ನು ನಗರಾಭಿವೃದ್ಧಿ ಪ್ರಾಧಿಕಾರ ಬಿಡುಗಡೆಗೊಳಿಸಿದೆ.

ಹೌದು..ರಾಜ್ಯದ‌ 10 ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಮೀಸಲಾತಿ ಪಟ್ಟಿ ಬಿಡುಗಡೆಗೊಳಿಸಿದ್ದು, ಬಳ್ಳಾರಿ – ಮೇಯರ್ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿಗೆ ಮೀಸಲಿದ್ದರೇ, ಉಪ ಮೇಯರ್ ಸ್ಥಾನ BCAW ಗೆ ಮೀಸಲಿದೆ. ಬೆಳಗಾವಿ – ಮೇಯರ್, ಸಾಮಾನ್ಯ, ಉಪ ಮೇಯರ್ ಸಾಮಾನ್ಯ ಮಹಿಳೆ.

ದಾವಣಗೆರೆ – ಮೇಯರ್ ಎಸ್ ಸಿ ಮಹಿಳೆ, ಉಪ ಮೇಯರ್ ಸಾಮಾನ್ಯ ಮಹಿಳೆ. ಹುಬ್ಬಳ್ಳಿ-ಧಾರವಾಡ – ಮೇಯರ್ ಬಿಸಿಎ, ಉಪ ಮೇಯರ್ ಎಸ್ಸಿ ಮಹಿಳೆ.

ಕಲಬುರ್ಗಿ-ಮೇಯರ್ ಸಾಮಾನ್ಯ ಮಹಿಳೆ, ಉಪ ಮೇಯರ್ ಬಿಸಿಬಿ. ಮಂಗಳೂರು–ಮೇಯರ್ ಸ್ಥಾನ ಸಾಮಾನ್ಯ, ಉಪ ಮೇಯರ್ ಸ್ಥಾನ BCAW ಗೆ ಮೀಸಲಿಡಲಾಗಿದೆ. ಶಿವಮೊಗ್ಗ–ಮೇಯರ್ ಸ್ಥಾನ BCAW, ಉಪ ಮೇಯರ್ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿದೆ. ತುಮಕೂರು- ಮೇಯರ್ ಎಸ್.ಟಿ, ಉಪ ಮೇಯರ್ ಸಾಮಾನ್ಯ ಮಹಿಳೆ. ವಿಜಯಪುರ – ಮೇಯರ್ ಸ್ಥಾನ ಎಸ್ಸಿ, ಉಪ ಮೇಯರ್ BCA

ಮೈಸೂರು –ಮೇಯರ್ ಸ್ಥಾನ ಸಾಮಾನ್ಯ ಮಹಿಳೆ, ಉಪ ಮೇಯರ್ ಸಾಮಾನ್ಯ ಹೀಗೆ ರಾಜ್ಯದ ಹತ್ತು ಮಹಾನಗರ ಪಾಲಿಕೆಯ ಮೀಸಲಾತಿ ಘೋಷಣೆ ಮಾಡಲಾಗಿದೆ.

ಇನ್ನೂ ದುರ್ದೈವದ ಸಂಗತಿ ಎಂದರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಇನ್ನೂ ಹಲವು ಪಾಲಿಕೆಗೆ ಚುನಾವಣೆ ನಡೆಯಬೇಕಾಗಿದೆ ಚುನಾವಣೆ ಮುನ್ನವೇ ಮೇಯರ್ ಉಪಮೇಯರ್ ಮೀಸಲಾತಿ ಘೋಷಣೆ ಮಾಡಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

12/02/2021 02:12 pm

Cinque Terre

25.63 K

Cinque Terre

3

ಸಂಬಂಧಿತ ಸುದ್ದಿ