ಹುಬ್ಬಳ್ಳಿ- ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ, ನೇಕಾರ ದೇವಾಂಗ ಸಮಾಜದವರು ನಗರದ ತಹಶಿಲ್ದಾರರ ಕಚೇರಿ ಎದುರುಗಡೆ ಇಂದು ಪ್ರತಿಭಟನೆ ಮಾಡಿದರು.
ದೇವಾಂಗ ಸಮಾಜ ಅಖಂಡ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ವಾಸಿಸುವ ಬಹುದೊಡ್ಡ ಸಮಾಜವಾಗಿದ್ದು, ಆದರೂ ರಾಜಕೀಯ ಶೈಕ್ಷಣಿಕ ರಂಗಗಳಲ್ಲಿ ಹಿಂದುಳಿದ ಸಮಾಜವಾಗಿದೆ. ನಮ್ಮ ಸಮಾಜ ಆರ್ಥಿಕವಾಗಿ ಸಬಲವಾಗಿಲ್ಲ. ಕಾರಣ ಶಿಕ್ಷಣ ನಮ್ಮ ವಿದ್ಯಾರ್ಥಿಗಳಿಗೆ ನಿಲುಕದಂತಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಆದಷ್ಟು ಬೇಗ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಆಗ್ರಹಿಸಿದರು..
Kshetra Samachara
10/02/2021 01:07 pm