ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: 110 ಕೆವಿ ವಿದ್ಯುತ್ ಸ್ಟೇಶನ್ ಸ್ಥಾಪನೆ: ಶಾಸಕ ಸಿ ಎಂ ನಿಂಬಣ್ಣವರ ಅಧಿವೇಶನದಲ್ಲಿ ಪ್ರಸ್ತಾಪ

ಕಲಘಟಗಿ:ತಾಲೂಕಿನ‌ ಬಮ್ಮಿಗಟ್ಟಿ ಹಾಗೂ ದೇವಿಕೊಪ್ಪ ಗ್ರಾಮಗಳಲ್ಲಿ 110 ಕೆ ವಿ ವಿದ್ಯುತ್ ಸ್ಟೇಶನ್ ಸ್ಥಾಪಿಸುವಂತೆ ಶಾಸಕ ಸಿ ಎಂ ನಿಂಬಣ್ಣವರ ವಿಧಾನ ಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆದಿದ್ದಾರೆ.

ಕಲಘಟಗಿ‌ ಮತಕ್ಷೇತ್ರದಲ್ಲಿ ಹತ್ತು ಸಾವಿರ ನೀರಾವರಿ ಪಂಪಸೆಟ್ ಗಳಿದ್ದು,ವಿದ್ಯುತ್ ಸಮಸ್ಯೆಯಾಗುತ್ತಿದೆ ಆದ ಕಾರಣ ಆದಷ್ಟು ಶೀಘ್ರ ವಿದ್ಯುತ್ ಉಪ ಕೇಂದ್ರಗಳನ್ನು ಮಂಜೂರು ಮಾಡುವಂತೆ ವಿನಂತಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ,ಕೆಪಿಟಿಸಿಎಲ್ ಟೆಕ್ನಿಕಲ್ ಅಡ್ವ್ಯಜರಿ ಕಮಿಟಿಗೆ ಈ ವಿಷಯ ಕಳಿಸಿ ಕೊಟ್ಟಿದ್ದೇವೆ.ಟೆಕ್ನಿಕಲ್ ಫಿಜಿಬಿಲಿಟಿ ಸ್ಟಡಿ ಮಾಡಿ,ಮುಂದಿನ ದಿನಮಾನಗಳಲ್ಲಿ 110 ಕೆ ವಿ ವಿದ್ಯುತ್ ಸ್ಟೇಶನ್ ಮಂಜೂರಾತಿಗೆ ಅವಕಾಶ ಮಾಡಿಕೊಡುತ್ತೆವೆ ಎಂದು ಉತ್ತರಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

07/02/2021 08:42 pm

Cinque Terre

29.46 K

Cinque Terre

4

ಸಂಬಂಧಿತ ಸುದ್ದಿ